ವಿಟ್ಲ, ಅ 16 (DaijiworldNews/SM): ಕೇರಳ ರಾಜ್ಯಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ವಿಟ್ಲ ಪೋಲೀಸರು ಬಂಧಿಸಿದ್ದಾರೆ. ಬೊಳಂತೂರು ಉನೈಸ್ ಹಾಗೂ ಇಕ್ಬಾಲ್ ಬಂಧಿತ ಆರೋಪಿಗಳು.
ಅ.14ರ ಸೋಮವಾರ ಕೊಡಪದವು ಎಂಬಲ್ಲಿ ಗೋವುಗಳನ್ನು ತುಂಬಿಕೊಂಡು ಕೇರಳಕ್ಕೆ ಐಸ್ ಕ್ರೀಂ ಸಾಗಾಟದ ಗೂಡ್ಸ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿದ ಪೊಲೀಸರು ವಾಹನ ಸಹಿತ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರನ್ನು ಕಂಡು ಪರಾರಿಯಾಗಿದ್ದರು.
ವಾಹನ ಚಾಲಕ ಉಸೈನ್ ಪರಾರಿಯಾದ ಆರೋಪಿ. ಇನ್ನು ವಾಹನಕ್ಕೆ ಬೆಂಗಾವಲಾಗಿ ಚಾಲಕನಿಗೆ ಮಾಹಿತಿ ನೀಡುತ್ತಿದ್ದ ಪ್ರಮುಖ ಗೋ ಕಳ್ಳ ಇಕ್ಕು ಯಾನೆ ಇಕ್ಬಾಲ್ ಎಂಬಾತ ತನ್ನ ಮೊಟರ್ ಸೈಕಲ್ ನಲ್ಲಿ ಹೊಗುತ್ತಿದ್ದರೂ ಸಹ ಪೋಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ.
ಪೋಲೀಸರು ವಾಹನವನ್ನು ಹಿಡಿದು ಗೋ ರಕ್ಷಣೆ ಮಾಡುವಲ್ಲಿ ಸಫಲರಾಗಿದ್ದರು. ಮೂರು ತಿಂಗಳ ಹಿಂದೆ ಇದೇ ಐಸ್ ಕ್ರೀಂ ಸಾಗಾಟ ವಾಹನದಲ್ಲಿ ಅಕ್ರಮವಾಗಿ ಗೋಕಳ್ಳತನ ಮಾಡಿ ಕೇರಳಕ್ಕೆ ಸಾಗಿಸುತ್ತಿದ್ದ ವೇಳೆ ವಾಹನ ಸಹಿತ ಆರೋಪಿ ಉಸ್ಮಾನ್ ಅವನನ್ನು ವಿಟ್ಲ ಪೊಲೀಸರು ಬೆನ್ನಟ್ಟಿ ಹಿಡಿದು ಪ್ರಕರಣ ದಾಖಲಿಸಿದ್ದರು. ಬಳಿಕ ವಾಹನ ಇಕ್ಕು ಎಂಬಾತನಿಗೆ ಮಾರಾಟ ಮಾಡಲಾಗಿತ್ತು.
ಇಕ್ಕು ಈ ವಾಹನದ ಬಣ್ಣವನ್ನು ಬದಲಾಯಿಸಿ ಅಕ್ರಮವಾಗಿ ಗೋಗಳನ್ನು ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದ. ಈ ಬಗ್ಗೆ ಖಚಿತವಾದ ಮಾಹಿತಿಯನ್ನು ಸಂಗ್ರಹಿಸಿದ ವಿಟ್ಲ ಪೋಲಿಸರು ಆರೋಪಿಗಳ ಮತ್ತು ವಾಹನದ ಮೇಲೆ ಕಣ್ಣಿಟ್ಟಿದ್ದರು.
ಸೋಮವಾರ ಕಾರ್ಯಚರಣೆ ನಡೆಸಿದ ಪೊಲೀಸರು ವಾಹನ ಬಿಟ್ಟು ಪರಾರಿಯಾಗಿದ್ದ ಆರೋಪಿ ಇಕ್ಕು ಮತ್ತು ಬೊಳಂತೂರು ಉನೈಸ್ ನನ್ನು ಒಕ್ಕೆತ್ತೂರಿನಲ್ಲಿ ಬಂಧಿಸಿದ್ದಾರೆ. ನ್ಯಾಯಾಲಯವು, ಆರೋಪಿಗಳಿಗೆ 15ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.