ಮಂಗಳೂರು, ಜ 6: ನಗರದ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಹತ್ಯೆಯಾಗಿರುವ ದೀಪಕ್ ರಾವ್ ಕುಟುಂಬಕ್ಕೆ ನೆರವು ನೀಡುವುದರೊಂದಿಗೆ ಸಹೃದಯಿಗಳು ಸ್ಪಂದಿಸಿದ್ದಾರೆ.
ಹತ್ಯೆಯಾದ ದೀಪಕ್ ಬಡ ಕುಟುಂಬದವರಾಗಿದ್ದು, ತನ್ನ ಕುಟುಂಬಕ್ಕೆ ಆಧಾರವಾಗಿದ್ದರು. ಈಡೀ ಕುಟುಂಬದ ಜವಬ್ದಾರಿ ದೀಪಕ್ ಹೆಗಲ ಮೇಲಿತ್ತು. ತಂದೆಯನ್ನು ಸಣ್ಣ ವಯಸ್ಸಲ್ಲಿಯೇ ಕಳಕೊಂಡ ದೀಪಕ್ ತನ್ನ ಕುಟುಂಬವನ್ನು ದುಡಿದು ತಾವೇ ನಿರ್ವಹಿಸುತ್ತಿದ್ದರು. ಇದೀಗ ತಾಯಿ ಪ್ರೇಮಾ ರಾವ್ ಅವರ ಮಂಗಳೂರಿನ ಕಾಟಿಪಳ್ಳದ ಸಿಂಡಿಕೇಟ್ ಬ್ಯಾಂಕಿನಲ್ಲಿ 17,43,859 ರೂಪಾಯಿ ಸಂಗ್ರಹವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸಂಘಟನೆಯ ಕಾರ್ಯಕರ್ತರು ದೀಪಕ್ ತಾಯಿಯ ಅಕೌಂಟ್ ಡಿಟೈಲ್ಸ್ ಹಾಕಿ, ಬಡ ಕುಟುಂಬಕ್ಕೆ ಧನ ಸಹಾಯ ನೀಡುವಂತೆ ವಿನಂತಿಸಿಕೊಂಡಿದ್ದರು. ಇದೀಗ ಇದಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಎರಡು ದಿನದಲ್ಲಿ ದೀಪಕ್ ತಾಯಿಯ ಬ್ಯಾಂಕ್ ಖಾತೆಗೆ 17,43,859 ಜಮೆ ಆಗಿದೆ.