ಮಂಗಳೂರು, ಅ 14 (DaijiworldNews/SM): ನಗರ ಪೊಲೀಸ್ ಕಮಿಷನರ್ ಡಾ. ಪಿಎಸ್ ಹರ್ಷ ತಮ್ಮ ಎಂದಿನ ಪೊಲೀಸ್ ಬೀಟ್ ವ್ಯವಸ್ಥೆಯನ್ನು ನೋಡಲು ಮಂಗಳೂರು ಶಕ್ತಿ ನಗರದ ಪೊಲೀಸ್ ವಸತಿ ಗೃಹದ ಬಳಿ ತೆರಳಿದರು. ಈ ಸಂದರ್ಭದಲ್ಲಿ ಪರಿಸರವನ್ನು ಕಂಡು ಪೊಲೀಸ್ ಕುಟುಂಬಕ್ಕೆ ಸ್ವಚ್ಚತೆಯ ಪಾಠ ಮಾಡಿದ್ದರು.
ಪೊಲೀಸ್ ವಸತಿ ಗೃಹದ ಸುತ್ತಮುತ್ತ ಶುಚಿತ್ವದ ಕೊರತೆ ಎದ್ದು ಕಾಣುತ್ತಿತ್ತು. ಇದನ್ನು ಕಂಡ ಕಮಿಷನರ್ ವಸತಿಗೃಹದ ಸಿಬ್ಬಂದಿಗಳ ವಿರುದ್ಧ ಗರಂ ಆದರು. ಅಲ್ಲಿನ ನಿವಾಸಿಗಳಿಗೆ ಸಕ್ಕತ್ ಕ್ಲಾಸ್ ತೆಗೆದುಕೊಂಡರು.
ಪ್ರಧಾನಿ ನರೇಂದ್ರ ಮೋದಿಯವರೇ ಬೀದಿಗಿಳಿದು ಕಸ ಹೆಕ್ಕುತ್ತಿದ್ದಾರೆ. ಆದರೆ, ನಿಮಗೆ ನಿಮ್ಮ ಪರಿಸರವನ್ನು ಸ್ಚಚ್ಚವಾಗಿಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಹಾಗೂ ಶುಚಿತ್ವವನ್ನು ಕಾಪಾಡುವ ಬಗ್ಗೆ ಪಾಠ ಮಾಡಿದರು. ಮೊದಲು ನಿಮ್ಮ ಪರಿಸರವನ್ನು ಶ್ರಮದಾನ ಮಾಡುವ ಮೂಲಕ ಸ್ವಚ್ಚವಾಗಿಡಿ ಎಂದು ಉಪದೇಶ ನೀಡಿದರು.