ಮಂಗಳೂರು, ಅ 13 (DaijiworldNews/SM): ಯುವ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ರೈಲ್ವೇ ಸ್ಟೇಷನ್ ಬಳಿಯ ವಸತಿ ಸಮುಚ್ಚಯದಲ್ಲಿ ರವಿವಾರದಂದು ನಡೆದಿದೆ.
ಎಂಎಸ್ಸಿ ವಿದ್ಯಾರ್ಥಿ ವಿಷ್ಣು(22) ಹಾಗೂ ಆತನ ಪ್ರೇಯಸಿ ಮೂಡುಬಿದಿರೆ ಖಾಸಗಿ ಕಾಲೇಜಿನಲ್ಲಿ ಫಿಸಿಯೋಥೆರಫಿ ಓದುತ್ತಿದ್ದ ಗ್ರೀಶ್ಮಾ(21) ಆತ್ಮಹತ್ಯೆ ಮಾಡಿಕೊಂಡವರು.
ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದ ಸಮೀಪದಲ್ಲಿರುವ ಲಾಡ್ಜೊಂದರಲ್ಲಿ ಇಲಿ ಪಾಷನ ಸೇವಿಸಿ ಈ ಜೋಡಿ ಸಾವಿಗೆ ಶರಣಾಗಿದೆ. ಮೃತರನ್ನು ಕೇರಳದ ಕಾಸರಗೋಡು ಮೂಲದವರೆಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗಲು ಬಯಸಿತ್ತು ಎನ್ನಲಾಗಿದೆ. ಆದರೆ ಬೇರೆ ಬೇರೆ ಧರ್ಮದವರಾಗಿದ್ದರಿಂದ, ಇವರ ಮದುವೆಗೆ ವಿರೋಧವಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.