ಮಂಗಳೂರು, ಜ 5: ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.
ದೀಪಕ್ ಹತ್ಯೆಯನ್ನು ಖಂಡಿಸುತ್ತೇನೆ. ದೀಪಕ್ ಹತ್ಯೆಗೆ ಸಂತಾಪ ಸೂಚಿಸುತ್ತೇನೆ. ಪ್ರತಿಯೊಂದು ಜೀವ ಅಮೂಲ್ಯವಾದದ್ದು. ಬಿಜೆಪಿ ಕೋಮು ಪಕ್ಷ. ಬಿಜೆಪಿಯವರು ದೀಪಕ್ ಹತ್ಯೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕೊಮು ಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.
ಸಮಾಜದಲ್ಲಿ ಕೆಲ ಜನ ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದು, ದುಷ್ಟ ಶಕ್ತಿಗಳಿಂದ ಜನರು ದೂರವಿರಬೇಕು. ಯಾವುದೇ ಕೆಟ್ಟ ವಿಷಯಗಳಿಗೆ ಜನ ಕಿವಿಕೊಡಬಾರದು. ಶಾಂತಿಯನ್ನು ಕಾಪಾಡಬೇಕು ಎಂದು ಈ ಮೂಲಕ ಜನತೆ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.