ಮಂಗಳೂರು ಜ 5: ಬೊಕ್ಕಪಟ್ಣ ಅಯ್ಯಪ್ಪ ಗುಡಿ ಬಳಿ ನಿವಾಸಿ ಸೂರಜ್ ಕುಂದರ್(51)ಬ್ರೈನ್ ಟ್ಯೂಮರ್ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆರ್ಥಿಕ ಬಲವೂ ಇವರಲ್ಲಿರಲಿಲ್ಲ. ಇದೀಗ ಇವರ ಚಿಕಿತ್ಸೆಗಾಗಿ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸಂಘಟನೆಯ ವತಿಯಿಂದ 50ಸಾವಿರ ರೂಪಾಯಿ ಸಹಾಯ ಧನ ಮಾಡಿದೆ.
ಉದ್ಯಮಿ ಹಾಗೂ ಸಮಾಜ ಸೇವಕ ಸೂರಜ್ ಕಲ್ಯ ಹಾಗೂ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಳ್ಳಾಲ್ ಬಾಗ್ ಕುಟುಂಬಕ್ಕೆ ಹಸ್ತಾಂತರಿಸಿದರು.
ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಳ್ಳಾಲ್ಬಾಗ್ ಸಂಘಟನೆ ಅಸ್ತಿತ್ವಕ್ಕೆ ಬಂದು ಕೇವಲ ೩ ವರ್ಷಗಳಲ್ಲಿ ತನ್ನ ಸಮಾಜಮುಖಿ ಕಾರ್ಯಗಳಿಂದ ಮನೆಮಾತಾಗಿದ್ದರೆ, 50 ಲಕ್ಷ ರೂ.ಮಿಕ್ಕಿ ಸಹಾಯಧನವನ್ನು ಬಡವರ ಕಲ್ಯಾಣಕ್ಕೆ ವಿತರಿಸಿ ಜಿಲ್ಲೆ ಮಾತ್ರವಲ್ಲ ಕರ್ನಾಟಕದಲ್ಲಿಯೇ ಜನಪರ ಸಂಘಟನೆಯಾಗಿ ಬೆಳೆಯುತ್ತಿದೆ ಎಂದು ಸೂರಜ್ ಕಲ್ಯ ಶ್ಲಾಘಿಸಿದರು.
ಸೂರಜ್ ಕುಂದರ್ ವೃತ್ತಿಯಲ್ಲಿ ಎಲೆಷ್ಟ್ರಿಯನ್ ಆಗಿದ್ದು ಸ್ಥಳೀಯವಾಗಿ ರಕ್ತದಾನದಂತಹ ಮಹತ್ವದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.ಇದೀಗ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಅಪಾರ ವೆಚ್ಚವಾಗುತ್ತಿದೆ. ಈ ನಿಟ್ಟಿನಲ್ಲಿ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸಂಘಟನೆಯು ಸದಸ್ಯರು ಹಾಗೂ ದಾನಿಗಳಿಂದ ಸಂಗ್ರಹಿಸಿದ ಆರ್ಥಿಕ ನೆರವು ನೀಡಿದೆ ಎಂದು ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಳ್ಳಾಲ್ ಬಾಗ್ ಹೇಳಿದರು. ಕಾರ್ಯಕ್ರಮದಲ್ಲಿ ರಾಕೇಶ್ ಪೂಜಾರಿ ಬಳ್ಳಾಲ್ ಬಾಗ್, ಅಭಿಷೇಕ್ ಅಮೀನ್ ಬಿಕರ್ನಕಟ್ಟೆ,ಲತೀಶ್ ಪೂಜಾರಿ,ರಿತೇಶ್ ಕೊಠಾರಿ, ಅಶ್ರಫ್ ಆಲಿ ಮುಂತಾದವರು ಉಪಸ್ಥಿತರಿದ್ದರು.