ಸುರತ್ಕಲ್ ಜ 4 : ವಿದೇಶಕ್ಕೆ ಹೋಗುವ ಆಸೆ ನನ್ನ ಮಗನಿಗಿತ್ತು, ಆದರೆ ಮಗ ಕಣ್ಣೆದುರು ಇರುವ ಸ್ವಾರ್ಥದಿಂದ ನಾನೇ ವಿದೇಶಕ್ಕೆ ಹೋಗುವುದನ್ನು ತಡೆದಿದ್ದೆ. ನಾನು ತಪ್ಪು ಮಾಡಿಬಿಟ್ಟೆ. ವಿದೇಶದಲ್ಲಿ ಸುಖವಾಗಿ ಇರುತ್ತಿದ್ದ . ನಮಗಾಗಿ ಮನೆಯನ್ನು ಕಟ್ಟಿ ಮನೆ ಸಾಲವನ್ನು ತೀರಿಸಿದ್ದ. ನನ್ನ ಮಗ ನನ್ನನ್ನು ಬಿಟ್ಟು ನಮ್ಮನ್ನು ಅನಾಥರನ್ನಾಗಿ ಮಾಡಿ ಹೋದಾ.. ನಾನು ಇನ್ನು ಸಂಜೆ 7 ರ ವೇಳೆಗೆ ಯಾರಿಗಾಗಿ ಕಾಯಲಿ ಕಂದಾ .... ಅಯ್ಯೋ ನನ್ನ ಚಿನ್ನದಂಥಹ ಮಗನನ್ನು ಕಳೆದುಕೊಂಡಿದ್ದೆನೆ. ಹತ್ಯೆ ಮಾಡಿದ ಪಾಪಿಗಳನ್ನು ಆ ಭಗವಂತ ನೋಡಿಕೊಳ್ಳುತ್ತೇನೆ. ಇದು ಕಾಟಿಪಳ್ಳದಲ್ಲಿ ಹತ್ಯೆಯಾದ ದೀಪಕ್ ಅವರ ತಾಯಿ ಪ್ರೇಮಲತಾ ಅವರ ಅತೀವ ಹತಾಶೆಯ ಕಣ್ಣೀರ ಮಾತು .. ಮಾದ್ಯಮಗಳೊಂದಿಗೆ ಮಾತನಾಡಿದ ದೀಪಕ್ ರಾವ್ ತಾಯಿ ಪ್ರೇಮಲತಾ ತಮ್ಮ ನೋವನ್ನು ತೋಡಿಕೊಂಡಿದ್ದು ಹೀಗೆ .