ಬಂಟ್ವಾಳ, ಅ 10 (Daijiworld News/MSP): ಬಂಟ್ವಾಳದ ನಾಡ ಕಚೇರಿ ಅಟಲ್ ಜೀ ಜನಸ್ನೇಹಿ ಕೇಂದ್ರ ಅಧಾರ್ ನೊಂದಣಿ ಕೆಲಸ ಮಾಡುತ್ತಿದ್ದ ಮೂರು ಆಪರೇಟರ್ ಗಳನ್ನು ಕೆಲಸದಿಂದ ಸಸ್ಫೆಂಡ್ ಮಾಡುವಂತೆ ಎ.ಡಿ.ಸಿ.ರೂಪಾ ಅವರು ಅದೇಶ ಹೊರಡಿಸಿದ್ದಾರೆ.
ವಿಟ್ಲದ ಪ್ರಭಾ ಹಾಗೂ ಬಂಟ್ವಾಳ ಅಧಾರ್ ಕೇಂದ್ರದ ಆಶಾ ಮತ್ತು ವಿಜಯ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಮೇಲಾಧಿಕಾರಿಗಳಿಗೆ ಯಾರಿಗೂ ಮಾಹಿತಿ ನೀಡದೆ ಅಧಾರ್ ಕೇಂದ್ರದಲ್ಲಿ ಸಿಬ್ಬಂದಿಗಳು ಅಧಾರ್ ತಿದ್ದುಪಡಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆಧಾರ್ ತಿದ್ದುಪಡಿಯಲ್ಲಿ ವಸೂಲಿ ಮಾಡಿದ ಲಕ್ಷಾಂತರ ರೂ ಹಣವನ್ನು ಇಲಾಖೆಗೆ ಕಟ್ಟದೆ ತಮ್ಮ ಬಳಿಯಲ್ಲಿಯೇ ಉಳಿಸಿಕೊಂಡಿದ್ದರು.
ಈ ವಿಷಯ ಕೊನೆಗೆ ತಹಶೀಲ್ದಾರ್ ರಶ್ಮಿ ಅವರ ಗಮನಕ್ಕೆ ಬಂದಿದ್ದು, ಕೂಡಲೇ ಹಣವನ್ನು ಇಲಾಖೆಯ ಖಾತೆಗೆ ಜಮಾ ಮಾಡಿಸಿದ್ದರು.
ಆದರೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ದಿನಗೂಲಿ ನೌಕರರಾದ ಮೂವರನ್ನು ಕೆಲಸದಿಂದ ಸಸ್ಪೆಂಡ್ ಮಾಡುವಂತೆ ಅಪಾರ ಜಿಲ್ಲಾಧಿಕಾರಿ ಅದೇಶ ಮಾಡಿದ್ದಾರೆ. ಬದಲಿ ವ್ಯವಸ್ಥೆ ಮಾಡುವ ವರೆಗೆ ಇಂದಿನಿಂದ ಎರಡು ದಿನಗಳ ಕಾಲ ಅಧಾರ್ ಕೇಂದ್ರ ಸ್ಥಗಿತಗೊಳಿಸಲಾಗಿದೆ ಎಂದು ತಹಶೀಲ್ದಾರ್ ಕಚೇರಿ ತಿಳಿಸಿದೆ.