ಮಂಗಳೂರು, ಜ 4: ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಅಂತ್ಯಕ್ರಿಯೆ ಶಿವಾಜಿ ಕ್ಷತ್ರಿಯ ಸಂಪ್ರದಾಯದ ವಿಧಿವಿಧಾನದಂತೆ ಹಿಂದೂ ರುದ್ರಭೂಮಿಯಲ್ಲಿ ನಡೆಯಿತು.
ಸುರತ್ಕಲ್ ಸಮೀಪದ ಕಾಟಿಪಳ್ಳದಿಂದ 5-6 ಕಿ.ಮೀ ದೂರದವರೆಗೆ ದೀಪಕ್ ರಾವ್ ಮೃತ ದೇಹದ ಯಾತ್ರೆ ನಡೆಸಿದ್ದು, ಭಾರಿ ಭದ್ರತೆಯೊಂದಿಗೆ ಕಾಟಿಪಳ್ಳದ ಜನತಾ ಕಾಲೋನಿ ರುದ್ರಭೂಮಿಯಲ್ಲಿ ಸಹೋದರ ಸತೀಶ್ ರಾವ್ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ದೀಪಕ್ ರಾವ್ ಸ್ವಗೃಹಕ್ಕೆ ಜನಸಾಗರವೇ ಹರಿದುಬಂದಿದ್ದು, ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗಿಯಾಗಿ ಕಂಬನಿ ಮಿಡಿದರು.