ಮಂಗಳೂರು,ಅ 09 (Daijiworld News/MSP): ಕರಾವಳಿಯಲ್ಲಿ ಡೆಂಗ್ಯೂ ಜ್ವರ ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಡೆಂಗ್ಯೂಗೆ ಬಲಿಯಾದವರನ್ನು ಪಾಂಡೇಶ್ವರದ ಸುಧಾಕರ್ ಆಚಾರ್ಯ (53) ಎಂದು ಗುರುತಿಸಲಾಗಿದೆ. ಇವರು ನಗರದ ಖಾಸಗಿ ಪೈನಾನ್ಸ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು.
ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅ. 7 ರ ಸೋಮವಾರ ಮೃತಪಟ್ಟಿದ್ದಾರೆ. ಆಸ್ಪತ್ರೆಯ ಚಿಕಿತ್ಸಾ ವೆಚ್ಚವೇ ಎರಡು ಲಕ್ಷ ದಾಟಿದ್ದು, ಇದಕ್ಕಾಗಿ ಸ್ನೇಹಿತರು ಮತ್ತು ಸಂಬಂಧಿಕರಿಂದ ಕುಟುಂಬಸ್ಥರು ಹಣ ಸಂಗ್ರಹಿದ್ದರು.
ಮೃತರು ತಾಯಿ, ಹೆಂಡತಿ, ಮಗಳು ಹಾಗೂ ಮಗನನ್ನು ಅಗಲಿದ್ದಾರೆ. ಬುಧವಾರ ಮಂಗಳೂರು ದಕ್ಷಿಣ ಶಾಸಕ, ವೇದವ್ಯಾಸ್ ಕಾಮತ್ ಅವರು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿ ಕುಟುಂಬ ಸದಸ್ಯರಿಗೆ ಸಂತ್ವಾನ ಹೇಳಿ ಸರ್ಕಾರದಿಂದ ಪರಿಹಾರವನ್ನು ನೀಡುವ ಭರವಸೆಯನ್ನುನೀಡಿದ್ದಾರೆ.