ಉಡುಪಿ, ಅ 06 (DaijiworldNews/SM): ಜಿಲ್ಲೆಯಲ್ಲಿ ಮೊದಲ ತ್ರಿವಳಿ ತಲಾಖ್ ಪ್ರಕರಣ ದಾಖಲಾಗಿದೆ. ಉಡುಪಿ ಇಂದ್ರಾಳಿ ನಿವಾಸಿ ಶಕೀಲ್ ಅಹ್ಮದ್ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿರುವ ಆರೋಪ ಎದುರಿಸುತ್ತಿರುವ ವ್ಯಕ್ತಿ.
ಶಕೀಲ್ ಮತ್ತು ಶಬನಾ ಅವರಿಗೆ 2000ನೇ ವರ್ಷದ ಫೆಬ್ರವರಿ ತಿಂಗಳಲ್ಲಿ ಬಜ್ಪೆಯಲ್ಲಿ ವಿವಾಹವಾಗಿತ್ತು. ಇವರಿಬ್ಬರಿಗೆ ಮೂವರು ಮಕ್ಕಳು ಇದ್ದಾರೆ. ಆರೋಪಿಯು ತನ್ನ ಹೆಂಡತಿಗೆ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತಿದ್ದರು ಎಂದು ಶಬನಾ ದೂರಿದ್ದಾರೆ.
ಮಾರ್ಚ್ ತಿಂಗಳಿನಿಂದ ಶಬನಾ ಮತ್ತು ಅವರ ಮಕ್ಕಳನ್ನು ಬಿಟ್ಟು ಶಕೀಲ್ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಎನ್ನಲಾಗಿದೆ. ಸೆಪ್ಟೆಂಬರ್ 16 ರಂದು ಇಂದ್ರಾಳಿ ದೇವಸ್ಥಾನ ಬಳಿ ಶಕೀಲಾ ಅವರಿಗೆ ಮೂರು ಬಾರಿ ತಲಾಖ್ ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಶಬನಾ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.