ಮಂಗಳೂರು, ಅ 05(Daijiworld News/MSP): ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತವೂ ಪ್ಯಾಸಿಝಂ ಸರ್ಕಾರಕ್ಕೆ ಸಮಾನವಾಗಿದೆ. ಹಿಟ್ಲರ್ ಮಾದರಿಯಲ್ಲಿ ಆಡಳಿತ ನಿರ್ವಹಣೆ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಅ. 05 ರ ಶನಿವಾರ ಬೆಳಗ್ಗೆ , ನೆರೆಯಿಂದಾಗಿ ಆಸ್ತಿ-ಪಾಸ್ತಿ ಕಳೆದುಕೊಂಡು ಪರಿಹಾರ ಸಿಕ್ಕಿಲ್ಲವೆಂದು, ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಎಸ್.ಕೆ.ಮೇಗಲ್ ಗ್ರಾಮದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ ಕೊಡುವ ಸಲುವಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ ಈ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರಕ್ಕೆ ನಾವು ಕನಿಷ್ಠ ಪಕ್ಷ 5 ಸಾವಿರ ಕೋಟಿ ಪರಿಹಾರ ತಾತ್ಕಾಲಿಕವಾಗಿ ನೀಡಿ ಎಂದು ಮನವಿ ಮಾಡಿದ್ದೆವು. ಆದರೆ ಎರಡು ತಿಂಗಳ ಬಳಿಕ ಕೇವಲ 1200 ಕೋಟಿ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ಹಣವನ್ನು ಖರ್ಚು ಮಾಡಿರಬೇಕು.ಆದರೆ ಇದೀಗ ಖಜಾನೆಯಲ್ಲಿ ಹಣವಿಲ್ಲ ಅಂತಾರೆ. ಸಿಎಂಗೆಗೆ ಜ್ಞಾನ ಇದ್ಯಾ ಇಲ್ವಾ ಅಂತಾ ಗೊತ್ತಿಲ್ಲ. ಅವರಿಗೆ ಹಣಕಾಸಿನ ಬಗ್ಗೆ ಜ್ಞಾನ ಇಲ್ಲಾ ಅನ್ನುವುದು ಅವರ ಹೇಳಿಕೆಯಿಂದ ಅರ್ಥವಾಗುತ್ತೆ. ಖಜಾನೆಯಲ್ಲಿ ಹಣ ಖಾಲಿ ಆಗೋಕೆ ಚಾನ್ಸೇ ಇಲ್ಲ.ಯಾಕಂದ್ರೆ ಪ್ರತಿ ತಿಂಗಳು ತೆರಿಗೆ ಸಂಗ್ರಹವಾಗುತ್ತೆ ಎಂದು ಹೇಳಿದರು.