ಮಂಗಳೂರು,ಅ 4 (Daijiworld News/RD): ದುಬೈ ಸೇರಿದಂತೆ ಅರಬ್ ದೇಶಗಳಿಗೆ ಹೋಗಿ ಕೋಟಿ ಕೋಟಿ ಹಣ ಸಂಪಾದಿಸಿದವರ ಪೈಕಿ ಮಂಗಳೂರಿಗರದ್ದೇ ಮೇಲುಗೈ. ಈ ಮಧ್ಯೆ ಉದ್ಯೋಗ ಅರಸಿ ವಿದೇಶಕ್ಕೆ ಹೋಗುವವರನ್ನೇ ಟಾರ್ಗೆಟ್ ಮಾಡಿ ಅಕ್ರಮ ದಂಧೆ ಮಾಡುತ್ತಿರುವ ಏಜೆನ್ಸಿಗಳಿಗೆ ಪೊಲೀಸರು ಬಲೆ ಬೀಸಿದ್ದರೆ.
ದುಬೈ, ಕುವೈತ್ ಸೇರಿದಂತೆ ವಿವಿಧ ಅರಬ್ ಮತ್ತು ಗಲ್ಫ್ ದೇಶಗಳಿಗೆ ಉದ್ಯೋಗ ಅರಸಿಕೊಂಡು ಹೋಗುತ್ತಿರುವುದನ್ನು ಗಮನಿಸಬಹುದು. ಇನ್ನು ಕರಾವಳಿಯಲ್ಲಿಯೂ ಬಹುಪಾಲು ಯುವಕರು ಉದ್ಯೋಗ ಅರಸಿ ವಿದೇಶಕ್ಕೆ ಹೋಗುತ್ತಾರೆ. ಇವರಲ್ಲಿ ಹಲವರು ತಮ್ಮ ಕಾಂಟಾಕ್ಟ್ ಮೂಲಕ ಊರಿನ ಯಾರಿಗಾದ್ರೂ ಉದ್ಯೋಗ ಬೇಕಂದ್ರೆ ಎಂಪ್ಲಾಯ್ ವಿಸಾ ತೆಗಿಸಿಕೊಡ್ತಾರೆ. ಆದರೆ ಇತ್ತೀಚೆಗೆ ಮಂಗಳೂರಿನಲ್ಲಿ ಉದ್ಯೋಗ ವೀಸಾ ಕೊಡಿಸುವ ವಿವಿಧ ಏಜೆನ್ಸಿಗಳು ಹೆಚ್ಚಾಗುತ್ತಿದ್ದು, ಅವುಗಳಲ್ಲಿ ಹಲವು ಫೇಕ್ ಏಜೆನ್ಸಿಗಳಾಗಿವೆ ಎಂಬ ಅಂಶ ಬೆಳಕಿಗೆ ಬಂದಿದೆ. ಮಂಗಳೂರಲ್ಲಿ ವಿದೇಶಾಂಗ ಸಚಿವಾಲಯದಿಂದ ಲೈಸೆನ್ಸ್ ಇಲ್ಲದ ಅದೆಷ್ಟೋ ಏಜೆನ್ಸಿಗಳು ವೀಸಾ ಕೊಟ್ಟು ಜನರನ್ನು ವಂಚಿಸುತ್ತಿರೋ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಫೇಕ್ ಸಂಸ್ಥೆಗಳ ಲಿಸ್ಟ್ ಈ ರೀತಿಯಾಗಿದೆ.
ಕೆರಿಯರ್ ಪಾಯಿಂಟ್ ಟ್ರಾವೆಲ್ ಏಜೆನ್ಸಿ - ಬೆಂದೂರ್
ವೆಲ್ ಇಮ್ತಿಯಾಜ್ ಇಂಟರ್ ನ್ಯಾಶನಲ್ ಟ್ರಾವೆಲ್ ಏಜೆನ್ಸಿ - ಕಂಕನಾಡಿ
ಆಸ್ ಮ್ಯಾಕ್ಸ್ ಎಂಟರ್ಪೈಸಸ್ - ನೆಲ್ಲಿಕಾಯಿ
ಸ್ಕೈವೇ ಟ್ರಾವೆಲ್ಸ್ - ಫಳ್ನೀರ್
ಮಾಸ್ಟರ್ಸ್ ಅಸೋಸಿಯೇಟ್ ಮ್ಯಾನ್ ಪವರ್ ಕನ್ಸಲ್ಟಂಟ್ - ಬಲ್ಮಠ
ಫ್ಲೈ ಕಿಂಗ್ - ರಾವ್ ಅಂಡ್ ರಾವ್ ಸರ್ಕಲ್ ಬಳಿ ಇದೆ.
ಈ ಫೇಕ್ ಏಜೆನ್ಸಿಗಳ ಹಾವಳಿಗೆ ಕಡಿವಾಣ ಹಾಕಲು, ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನೇತೃತ್ವದ ತಂಡ ಮುಂದಾಗಿದ್ದು, ಮಂಗಳೂರು ಪೂರ್ವ, ಉತ್ತರ ಮತ್ತು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಯ್ತು. ಈ ವೇಳೆ 6 ಸಂಸ್ಥೆಗಳ ಬನ್ಣ ಬಯಲಾಗಿದ್ದು, ಇದೀಗ ಈ 6 ಏಜೆನ್ಸಿಗಳ ಮೇಲೆ ಇಮಿಗ್ರೇಶನ್ ಆಕ್ಟ್ 10, 24 ಅಡಿಯಲ್ಲಿ ಮತ್ತು ಐಪಿಸಿ ಸಕ್ಷನ್ 420 ಪ್ರಕಾರ ಕ್ರಿಮಿನಲ್ ಕೇಸ್ ರಿಜಿಸ್ಟರ್ ಮಾಡಿಕೊಳ್ಳಲಾಗಿದೆ.