ಮಂಗಳೂರು, ಅ. 4 (Daijiworld News/MSP): ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಸರಾ ಹಬ್ಬ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶ್ರೀ ಶಾರದಾ ದೇವಿಯ ವಿಗ್ರಹಾ ವಿಸರ್ಜನೆ ಶೋಭಾಯಾತ್ರೆಗೆ ಇನ್ನೇನು ಚಾಲನೆ ಸಿಗಲಿದೆ.
ಹೀಗಾಗಿ ಶೋಭಾಯಾತ್ರೆ ನಡೆಯಲಿರುವ ಸಮಯ ಕಿಡಿಗೇಡಿ ಅಮಲು ಪದಾರ್ಥ ಸೇವಿಸಿ ಅಹಿತಕರ ಘಟನೆಗಳಿಗೆ ಕಾರಣರಾಗಿ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಸೂಕ್ತ ಬಂದೋಬಸ್ತ್ ಮಾಡಿ ಸಾರ್ವಜನಿಕ ಶಾಂತಿ , ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಸೆ. 29 ರಿಂದ ಅ. 13 ರವರೆಗೆ ಶ್ರೀ ಶಾರದಾ ದೇವಿಯ ವಿಗ್ರಹ ವಿಸರ್ಜನಾ ಶೋಭಾ ಯಾತ್ರೆ ನಡೆಯುವ ಸ್ಥಳಗಳಲ್ಲಿ ವೈನ್ ಶಾಪ್ , ಬಾರ್ ಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಿಂಧು ಬಿ.ರೂಪೇಶ್ ಆದೇಶಿದ್ದಾರೆ.