ಉಡುಪಿ, ಜ 3: ಇಲ್ಲಿನ ಮಲ್ಪೆ ಸಮೀಪ ಸಮುದ್ರ ತೀರದಲ್ಲಿ ಲಂಗರು ಹಾಕಿದ್ದ ಬೋಟ್ ಒಂದರಲ್ಲಿ ಜನವರಿ 2 ರ ಮಂಗಳವಾರ ರಾತ್ರಿ ಅಚಾನಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಗ್ನಿಯ ಕೆನ್ನಾಲಿಗೆ ಲಂಗರು ಹಾಗಿದ್ದ ಇತರ ಬೋಟ್ ಗಳಿಗೆ ಅವರಿಸೋ ಸಾಧ್ಯತೆ ಹೆಚ್ಚಿದ್ದರಿಂದ ಅಕ್ಕ ಪಕ್ಕ ಇದ್ದ ಬೋಟ್ ಗಳನ್ನು ಸ್ಥಳಾಂತರಿಸಲಾಯಿತು. ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಲಂಗರು ಹಾಕಿದ್ದ ಇತರ ಬೋಟ್ ಗೂ ಬೆಂಕಿ ಹಬ್ಬುವ ಸಂಭಾವ್ಯ ಅನಾಹುತವನ್ನು ತಪ್ಪಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲದಿದ್ದರೂ ಶಾರ್ಟ್ ಸರ್ಕ್ಯೂಟ್ ಈ ಅನಾಹುತಕ್ಕೆ ಕಾರಣ ಎಂದು ನಂಬಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.