ಸುಬ್ರಹ್ಮಣ್ಯ, ಅ 3 (Daijiworld News/RD): ಕುಕ್ಕೆಯೊಡೆಯನ ನೂತನ ಗತ ವೈಭವದ ಬ್ರಹ್ಮರಥ ಕುಕ್ಕೆ ಪುರ ಪ್ರವೇಶಿಸಿದ್ದು, ಮುಸ್ಲಿಂ ಬಾಂಧವರು ನೆರೆದಿರುವ ಭಕ್ತಾಧಿಗಳಿಗೆ ಲಡ್ಡು ಹಂಚುವ ಮೂಲಕ ರಥವನ್ನು ಅದ್ದೂರಿಯಾಗಿ ಸ್ವಾಗತಿಸಿ, ಈ ಸಂಭ್ರಮದ ಕ್ಷಣದಲ್ಲಿ ಪಾಲ್ಗೊಂಡರು.
ರಥದಲ್ಲಿ ಸಾಗಿ ಬಂದ ನೂರಾರು ಭಕ್ತರಿಗೆ ಮರ್ದಾಳದ ಮುಸ್ಲಿಂ ಬಾಂಧವರು ಸಿಹಿ ತಿನಿಸುಗಳನ್ನು ವಿತರಿಸುವ ಮೂಲಕ ಬ್ರಹ್ಮರಥವನ್ನು ಸ್ವಾಗತಿಸಿದರು. ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚಾತ್ತಿದ್ದು, ಈ ಸಂದರ್ಭದಲ್ಲಿ ಮರ್ದಾಳದ ಮುಸ್ಲಿಂ ಸಹೋದರರು ಸಾಮರಸ್ಯದ ಸಂದೇಶವನ್ನು ಸಾರಿದ್ದಾರೆ.
ಕೋಟೇಶ್ವರದಲ್ಲಿ ಸಿದ್ಧಗೊಂಡ ಬ್ರಹ್ಮರಥ ಬುಧವಾರವು ಅದ್ದೂರಿ ಮೆರವಣಿಗೆಯ ಮೂಲಕ ಕುಕ್ಕೆ ಪುರ ಪ್ರವೇಶಿಸಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಭಕ್ತರು ಪಾತ್ರರಾಗಿದ್ದಾರೆ.