ಮಂಗಳೂರು, ಅ 2 (Daijiworld News/RD): ಪ್ರತ್ಯೇಕ ಪ್ರಕರಣದಲ್ಲಿ ಎರಡು ಮೊಬೈಲ್ ಗಳನ್ನು ಕಳವು ಮಾಡಿ ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ. ನಗರದ ಒಣ ಮೀನು ಮರ್ಕೆಟ್ ಬಳಿ ವ್ಯಕ್ತಿಯೊಬ್ಬರ ಮೊಬೈಲ್ ನ್ನು ಅಪರಿಚಿತರಿಬ್ಬರು ಯಮಾರಿಸಿ ಪರಾರಿಯಾದ ಘಟನೆ ನಡೆದಿದೆ.
ನಗರದ ಸರ್ವೀಸ್ ಬಸ್ ನಿಲ್ದಾಣದ ಬಳಿಯಿರುವ ಒಣ ಮೀನು ಮಾರ್ಕೆಟ್ ಸಮೀಪ ಭಾನುವಾರ ರಾತ್ರಿ9.30ರವೆಳೆಗೆ ಮಂಜುನಾಥ್ ಎಂಬವರು ನಿಂತಿದ್ದರು. ಈ ಸಂದರ್ಭದಲ್ಲಿ ಕಪ್ಪು ಬಣ್ಣದ ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ಇಬ್ಬರೂ ಅವರ ಬಳಿ ಬಂದಿದ್ದರು. ಅದರಲ್ಲಿ ಒಬ್ಬಾತ ತುರ್ತಾಗಿ ಒಬ್ಬರಿಗೆ ಪೋನ್ ಮಾಡಬೇಕಿದೆ. ದಯವಿಟ್ಟು ನಿಮ್ಮ ಮೊಬೈಲ್ ಕೊಡುವಿರಾ ಎಂದು ಅವರಲ್ಲಿ ಕೇಳಿದ್ದ. ಆತನ ಮಾತನ್ನು ನಂಬಿ ಮಂಜುನಾಥ್ ಮೊಬೈಲ್ ತೆಗೆದುಕೊಂಡ ಆತ ಯಾರ ಬಳಿಯೋ ಮಾತನಾಡುವಂತೆ ನಟಿಸಿ ಮೊಬೈಲ್ ಹಿಡಿದುಕೊಂಡು ಸ್ಕೂಟರ್ ನಲ್ಲಿ ಪರಾರಿಯಾಗಿದ್ದಾನೆ. ಮೊಬೈಲ್ ಮೌಲ್ಯ ೧೨ ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣ: ಹರ್ಷಿತ್ ಎಂಬವರು ಎಂಆರ್ ಪಿಎಲ್ ಕಂಪೆನಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಸೆ.೩೦ರಂದು ಬೆಳಗ್ಗೆ 8.30ಕ್ಕೆ ಪಲ್ಸರ್ ಬೈಕ್ ನ್ನು ಎಂ ಆರ್ ಪಿ ಎಲ್ ಫೇಸ್ 3 ಗೇಟು ಬಳಿ ನಿಲ್ಲಿಸಿ ಸೀಟಿನ ಕೆಳಗಡೆ ಮೊಬೈಲ್ ನ್ನು ಇಟ್ಟು ಹೋಗಿದ್ದರು. ಮಧ್ಯಾಹ್ನ 12.30ಕ್ಕೆ ಊಟದ ವಿಶ್ರಾಂತಿ ಸಮಯದಲ್ಲಿ ಮೋಟಾರ್ ಬೈಕ್ ಬಳಿ ಬಂದು ನೋಡಿದಾಗ ಮೊಬೈಲ್ ಅನ್ನು ಯಾರೋ ಕಳವು ಮಾಡಿರುವುದು ಪತ್ತೆಯಾಗಿದೆ. ಮೊಬೈಲ್ ನ ಮೌಲ್ಯ ೧೯ಸಾವಿರ ಎಂಸು ಅಂದಾಜಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.