ಬಂಟ್ವಾಳ, ಅ 1 (Daijiworld News/RD): ಧರ್ಮಗಳ ನಡುವೆ ಶಾಂತಿ ಕದಡುವ ಕೆಲಸ ಹೆಚ್ಚಾಗುತ್ತಿದ್ದು ಇಂಥ ಸಂಧರ್ಭದಲ್ಲಿ, ಬಂಟ್ವಾಳ ತಾಲ್ಲೂಕಿನ ಮುಸ್ಲಿಂ ಸಮುದಾಯ ಶಾಂತಿ ಸೌಹಾರ್ದತೆ, ಸಾಮರಸ್ಯದ ಸಂದೇಶವನ್ನು ಸಮಾಜಕ್ಕೆ ಎತ್ತಿ ತೋರಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಉದ್ಯಮಿ ಮುತ್ತಪ್ಪ ರೈ ದೇರ್ಲ ಮತ್ತು ಅಜಿತ್ ಶೆಟ್ಟಿ ಕಡಬ ಅರ್ಪಣೆ ಮಾಡಲಿರುವ ಬ್ರಹ್ಮರಥ ಇಂದು ಕದ್ರಿಯಿಂದ ಹೊರಟು ಬಂಟ್ವಾಳ ತಲುಪಿದಾಗ ಅಲ್ಲಿನ ಮುಸ್ಲಿಂ ಭಾಂಧವರು, ಹಾಗೂ ಸಾರ್ವಜನಿಕರು ಹಿಂದೂ ಧಾರ್ಮಿಕ ರಥವನ್ನು ಅದ್ದೂರಿಯಾಗಿ ಸ್ವಾಗತಿಸಿದರು. ರ್ಯಾಲಿಯಲ್ಲಿ ಭಾಗವಹಿಸಿದ್ದ ಹಿಂದೂ ಭಕ್ತರಿಗೆ ತಂಪುಪಾನೀಯ, ತಿಂಡಿ ತಿನಿಸುಗಳನ್ನು ನೀಡಿದ ಮುಸ್ಲಿಂ ಬಾಂಧವರು, ಭಕ್ತರ ದಣಿವಾರಿಸಿದರು.
ಈ ವೇಳೆ ‘ಬ್ರಹ್ಮರಥ’ದಲ್ಲಿ ಭಾಗವಹಿಸಿದ ನೂರಾರು ಭಕ್ತರು ಮುಸ್ಲಿಮರ ಈ ಸೇವೆಗೆ ಸಂತಸ ವ್ಯಕ್ತಪಡಿಸಿದ್ದಾರೆ, ಇವರ ಸೇವೆಗೆ ಸೇರಿದ ಜನರು ಶ್ಲಾಘಿಸಿದ್ದಾರೆ.