ಬಂಟ್ವಾಳ, ಅ.01(Daijiworld News/SS): ಇಲ್ಲಿನ ಎಸ್.ವಿ.ಎಸ್ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ನಡೆದ ವಿದ್ಯಾರ್ಥಿಗಳ ಮುಷ್ಕರದಲ್ಲಿ ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ ಭಾಗವಹಿಸಿದರು.
ಮುಷ್ಕರದ ಬಳಿಕ ರಮಾನಾಥ ರೈ ಅವರು ವಿದ್ಯಾರ್ಥಿಗಳ ಅಹವಾಲುಗಳಿಗೆ ಸ್ಪಂದಿಸುವಂತೆ ಎಸ್.ವಿ.ಎಸ್ ಕಾಲೇಜಿಗೆ ಭೇಟಿ ನೀಡಿ ಸಂಚಾಲಕರಾದ ಕೊಡ್ಲಗಿ ಪ್ರಕಾಶ್ ಶೆಣೈರೊಡನೆ ಮಾತುಕತೆ ನಡೆಸಿದರು. ಬಳಿಕ ವಿದ್ಯಾರ್ಥಿಗಳ ಬೇಡಿಕೆ ಈಡೇರುವುರರೊಂದಿಗೆ ಮುಷ್ಕರವು ಮಾಜಿ ಸಚಿವರ ನೇತೃತ್ವದಲ್ಲಿ ಕೊನೆಗೊಂಡಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಸದಾಶಿವ ಬಂಗೇರ, ಜನಾರ್ದನ್ ಚಂತಿಮಾರ್, ಜಗದೀಶ್ ಕೊಯಿಲ, ಪ್ರಶಾಂತ್ ಕುಲಾಲ್, ಚಂದ್ರಶೇಖರ್ ಬಾಳ್ತಿಲ, ವಿಶ್ವಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.