ಮಂಗಳೂರು ಜ 2:ಕರ್ನಾಟಕದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ಹೆಚ್ಚಾಗುತ್ತಿರುವ ಲವ್ ಜಿಹಾದ್ ಪ್ರಕರಣಗಳ ವಿರುದ್ದ ಜ 3 ರಿಂದ ಬೃಹತ್ ಜನಜಾಗೃತಿ ಸಭೆ ಕೈಗೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ನ ಕಾರ್ಯಧ್ಯಕ್ಷ ಎಂ.ಬಿ ಪುರಾಣಿಕ್ ಹೇಳಿದ್ದಾರೆ. ವಿ.ಹಿಂ.ಪ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಲವ್ ಜಿಹಾದ್ ಒಂದು ದೊಡ್ಡ ಜಾಲವಾಗಿದ್ದು ಇದಕ್ಕೆ ದಕ್ಷಿಣ ಕನ್ನಡ, ಕಾಸರಗೋಡು , ಉಡುಪಿ ಭಾಗದ ಹಿಂದೂ ಯುವತಿಯರು ಬಲಿಯಾಗುತ್ತಿದ್ದು, ಪ್ರೀತಿ ಪ್ರೇಮ ದ ಆಮೀಷಕ್ಕೆ ಒಳಗಾಗಿ ಹಲವಾರು ಹೆಣ್ಮಕ್ಕಳು ಇಸ್ಲಾಂಗೆ ಮತಾಂತರವಾಗುತ್ತಿದ್ದು ಇದೊಂದು ವ್ಯವಸ್ಥಿತ ಹುನ್ನಾರ ಎಂದು ಕಿಡಿಕಾರಿದರು. ಈ ಹಿನ್ನಲೆಯಲ್ಲಿ ಜ 3 ಬುಧವಾರ ಬೆಳಗ್ಗೆ 10.30 ಕ್ಕೆ ಪಿವಿಎಸ್ ನ ಲಕ್ಷ್ಮಿ ನಾರಾಯಣ ದೇವಸ್ಥಾನದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ನಗರದ ಎಲ್ಲಾ ಮನೆ ಮನೆಗಳಿಗೆ ಹೋಗಿ ಕರ ಪತ್ರ ಹಂಚುವುದರ ಮುಖಾಂತರ ಪ್ರಾರಂಭವಾಗಲಿದೆ. ವಿಶ್ವಹಿಂದೂ ಪರಿಷತ್ , ಬಜರಂಗದಳ, ದುರ್ಗಾವಾಹಿನಿ ಘಟಕಗಳ ಮುಖಾಂತರ ಪ್ರತಿ ವಾರ್ಡ್ ಹಾಗೂ ಗ್ರಾಮಗಳಲ್ಲ್ಲಿ ಸಭೆಗಳನ್ನು ನಡೆಸಿ ಜನಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದರು .
ಇದಲ್ಲದೆ ಕರಾವಳಿ ಭಾಗದಲ್ಲಿ ಎಲ್ಲಾ ಗ್ರಾಮಗಳಲ್ಲಿ ಊರಿನ ಪ್ರಮುಖರನ್ನು , ಗಣ್ಯರನ್ನು ಒಳಗೊಂಡ ಒಂದು ಸಮಿತಿಯನ್ನು ರಚನೆ ಮಾಡಿ ಲವ್ ಜಿಹಾದ್ ವಿರುದ್ದ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುವುದು . ಪ್ರತಿ ತಿಂಗಳಲ್ಲಿ ಒಮ್ಮೆ ಸಭೆ ಸೇರಿ ಹೆಣ್ಮಕಳು ಷಡ್ಯಂತ್ರಕ್ಕೆ ಬಲಿಯಾಗದಂತೆ ತಡೆಯಲು ಯೋಜನೆ ರೂಪಿಸಲಾಗುವುದು ಎಂದರು.
ಇದೇ ವೇಳೆ ಕಳೆದ ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಬಲಿಯಾಗುತ್ತಿರುವ ಲವ್ ಜಿಹಾದ್ ಪ್ರಕರಣದಿಂದ ಸಮಾಜದ ಸ್ವಸ್ಥ್ಯ ಹಾಳಾಗುತ್ತಿದ್ದು ಜಿಲ್ಲೆಯಲ್ಲಿ ಅಶಾಂತಿ ನಿರ್ಮಾಣಕ್ಕೂ ಕಾರಣವಾಗಿದೆ. ಪೊಲೀಸ್ ಇಲಾಖೆ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇದೇ ವೇಳೆ ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ , ವಿ.ಹಿ.ಪ ನ ಗೋಪಾಲ್ ಕುತ್ತಾರ್ , ಭುಜಂಗ ಕುಲಾಲ್ , ಮುಂತಾದವರು ಉಪಸ್ಥಿತರಿದ್ದರು.