ಮಂಗಳೂರು, ಸೆ 30 (Daijiworld News/MSP): ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಅವರು ಮೂರು ದಿನಗಳ ಕಾಲ ಅನಂ ಪ್ರೇಮ್ ಸಮಾಜ ಸೇವಾ ಸಂಸ್ಥೆ ,ಮುಂಬೈಯ ಹೆಲನ್ ಕೆಲ್ಲರ ಇನ್ಸಿಸ್ಟ್ಯೂಟ್ ಫಾರ್ ಡೀಫ್ ಅಂಡ್ ಡೀಫ್ ಬ್ಲೈಂಡ್ ಸಂಸ್ಥೆ ಮತ್ತು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ನಡೆಯುವ ಅಂತಾರಾಷ್ಟ್ರೀಯ ವಿಶಿಷ್ಟ ಮಕ್ಕಳ ಸಂಗಮ 2019 ನಗರದ ಸಂಘ ನಿಕೇತನದಲ್ಲಿ ಸೆ. ೩೦ ರ ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, "ಇಂತಹ ಅಪರೂಪ ಕಾರ್ಯಕ್ರಮ ಉದ್ಘಾಟಿಸಿ ಸಂತೋಷವಾಯಿತು, ಇಲ್ಲಿರುವ ಅನೇಕ ಮಕ್ಕಳು ಕೇಳಲು ಅಥವಾ ಮಾತನಾಡಲು ಸಾಧ್ಯವಿಲ್ಲ, ಆದರೆ ಯಾವುದೇ ಒಳ್ಳೆಯ ಕೆಲಸ ಮಾಡಲು ಕೇಳಲು ಅಥವಾ ಮಾತನಾಡಲು ಇವುಗಳ ಅಗತ್ಯವಿಲ್ಲ. ನಾವು ಕೂಡಾ ವಿಶೇಷ ಮಕ್ಕಳ ಭಾಷೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಭಾವನೆಯನ್ನು ಅರ್ಥಮಾಡಿಕೊಳ್ಳಕೊಂಡು ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬಹುದಾಗಿದೆ ಎಂದರು
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, "ಎರಡು ತಿಂಗಳ ಹಿಂದೆ ಸಂಘಟಕರು ಈ ಕಾರ್ಯಕ್ರಮವನ್ನು ನಡೆಸಲು ಸಂಪರ್ಕಿಸಿದ್ದರು. ಅದರಂತೆಯೇ ನಾವು ಕಾರ್ಯಕ್ರಮಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಿದ್ದೇವೆ. ಈ ಸಂಗಮಕ್ಕಾಗಿ ಶ್ರೀಲಂಕಾದ ಮಕ್ಕಳು ಹಾಗೂ ವಿವಿಧ ರಾಜ್ಯಗಳ ಮಕ್ಕಳು ಬಂದಿದ್ದಾರೆ ಎಂದರು.
ಈ ಮೂರು ದಿನಗಳ ಶಿಬಿರದಲ್ಲಿ ಮೊದಲ ದಿನದಲ್ಲಿ ಡ್ರಾಯಿಂಗ್, ಮೊನೊ ಆಕ್ಟಿಂಗ್, ಡ್ರಾಮಾ, ನ್ಯೂಸ್ ರಿಪೋರ್ಟಿಂಗ್ ಸ್ಪರ್ಧೆಗಳನ್ನು ಏರ್ಪಡಿದ್ದರು. ಇದರೊಂದಿಗೆ ಆನಿಮೇಷನ್, ಕೃತಕ ಹೂವು ತಯಾರಿಕೆ, ಜೇಡಿಮಣ್ಣಿನಿಂದ ಕಲಾಕೃತಿ, ಆಭರಣ ತಯಾರಿಕೆ ಕುರಿತು ಕಾರ್ಯಾಗಾರಗ ನಡೆಸಲಾಗುವುದು.
ಎರಡನೇ ದಿನ ಮಕ್ಕಳನ್ನು ಪಿಲಿಕುಳ, ಕಡಲತೀರಗಳು ಮತ್ತು ಕುದ್ರೋಲಿ ದೇವಸ್ಥಾನದಂತಹ ನಗರದ ವಿವಿಧ ಸ್ಟಳ ಗಳ ವೀಕ್ಷೆಣೆಗೆ ಅವಕಾಶ ಕಲ್ಪಿಸಲಾಗಿದೆ, ಶಿಬಿರದ ಕೊನೆಯ ದಿನ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಈ ಶಿಬಿರದಲ್ಲಿ ಸುಮಾರು 540 ಮಂದಿ ಭಾಗವಹಿಸಲಿದ್ದು ಅವರಲ್ಲಿ 360 ಮಂದಿ ದೇಶದ ಮತ್ತು ಶ್ರೀಲಂಕಾ ದೇಶದ ವಿದ್ಯಾರ್ಥಿಗಳು ,80 ಶಿಕ್ಷಕರು ಮತ್ತಿತರರು ಭಾಗವಹಿಸಿದ್ದಾರೆ.