ಕಾರ್ಕಳ, ಸೆ 28 (Daijiworld News/MSP): ದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಸಮಾನ ನಾಗರಿಕ ಕಾನೂನು ಜಾರಿಗೆ ತರಬೇಕು. ಹೆಚ್ಚುತ್ತಿರುವ ಜನಸಂಖ್ಯಾ ಸ್ಪೋಟದಿಂದಾಗಿ ದೇಶದಲ್ಲಿನ ನೈಸರ್ಗಿಕ ಸಂಪತ್ತಿನ ಸೌಕರ್ಯ, ಅರ್ಥಿಕ ಸ್ಥಿತಿ, ಉದ್ಯೋಗ,ದವಸ-ಧಾನ್ಯ, ಶಿಕ್ಷಣ ಸರಕಾರಿ ಸೌಕರ್ಯ ಸುರಕ್ಷೆಯ ವ್ಯವಸ್ಥೆಯ ಮೇಲೆ ಇತ್ಯಾದಿಗಳ ಮೇಲೆ ವಿಪರೀತ ಒತ್ತಡ ನಿರ್ಮಾಣವಾಗುತ್ತದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಧರ್ಮಕ್ಕೊಂದು ಕಾನೂನು ವ್ಯವಸ್ಥೆಗೆ ತಿಲಾಂಜಲಿ ನೀಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಮುಖಂಡ ವಿಜಯಕುಮಾರ್ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ನಗರದ ವಿಸ್ತೃತ ಬಸ್ ನಿಲ್ದಾಣ ಪರಿಸರದಲ್ಲಿ ಹಿಂದು ಜನಜಾಗೃತಿ ಸಮಿತಿ ಆಯೋಜಿಸಿದ ರಾಷ್ಟ್ರೀಯ ಹಿಂದು ಆಂದೋಲನದಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು 370 ವಿಧಿ ತೆಗೆದು ಒಂದು ದೇಶ-ಒಂದು ಸಂವಿಧಾನದ ತತ್ವವನ್ನು ಜಾರಿಗೆ ತಂದಿರುವ ರೀತಿಯಲ್ಲಿ ಸಮಾನತೆ, ನ್ಯಾಯ, ಬಂಧುತ್ವ ಹಾಘೂ ಸುವ್ಯಸ್ಥೆ ಸ್ಥಾಪಿಸಲು ಒಂದು ದೇಶ-ಒಂದು ಕಾನೂನು ತರುವುದು ಅಗತ್ಯ ಇದೆ ಎಂದು ಹೇಳಿದರು.
ಜಗಮೋಹನ ರೆಡ್ಡಿಯ ಸರಕಾರವನ್ನು ಕಿತ್ತೊಗೆಯಿರಿ
ಆಂಧ್ರಪ್ರದೇಶದಲ್ಲಿ ಹಿಂದು ವಿರೋಧಿ ಕಾರ್ಯವನ್ನು ಮಾಡುವ ಜಗಮೋದನ ರೆಡ್ಡಿಯ ಸರಕಾರದಿಂದ ಹಿಂದು ವಿರೋಧಿ ಕಾನೂನನ್ನು ರೂಪಿಸಲಾಗುತ್ತಿದೆ. ಬಹಿರಂಗವಾಗಿ ಕ್ರೈಸ್ತ ಧರ್ಮದ ಪ್ರಚಾರವನ್ನು ಆರಂಭಿಸಲಾಗಿದೆ. ದೇವಸ್ಥಾನದ ಹಣವನ್ನು ಇತರ ಪಂಥದವರಿಗೆ ನೀಡಲಾಗುತ್ತಿದೆ. ದೇವಸ್ಥಾನಗಳ ಭೂಮಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ. ಇದನ್ನು ಮುಂದಿಟ್ಟುಕೊಂಡು ಆಂಧ್ರಪ್ರದೇಶದಲ್ಲಿರುವ ಜಗಮೋಹನ್ ರೆಡ್ಡಿಯ ಸರಕಾರವನ್ನು ಕಿತ್ತೊಗೆಯುವಂತೆ ಕೇಂದ್ರ ಸರಕಾರವನ್ನು ಇದೇ ಸಂದರ್ಭದಲ್ಲಿ ವಿಜಯಕುಮಾರ್ ಒತ್ತಾಯಿಸಿದ್ದಾರೆ.
ಇತರ ಬೇಡಿಕೆಗಳು
ಶ್ರೀ ಜಗನ್ನಾಥ ದೇವಸ್ಥಾನ, ಪುರಿಯಲಲಿನ ಮಠ, ದೇವಸ್ಥಾನವನ್ನು ಅಕ್ರಮವೆಂದು ಒಡೆಯುವ ಕೃತ್ಯವನ್ನು ಕೂಡಲೇ ನಿಲ್ಲಿಸಬೇಕು. ಅದೇ ರೀತಿಯಲ್ಲಿ ಇಲ್ಲಿಯವರೆಗೆ ಯಾವೆಲ್ಲ ಪ್ರಾಚೀನ ದೇವಸ್ಥಾನಗಳನ್ನು ಒಡೆಯಲಾಯಿತೋ ಅದನ್ನು ಒಡಿಶಾ ಸರಕಾರ ಪುನಃ ನಿರ್ಮಿಸಿ ಕೊಡಬೇಕು. ನವದೆಹಲಿಯಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಮೂರ್ತಿಗೆ ಕಪ್ಪು ಮಸಿ ಬಳಿದ ಕಾಂಗ್ರೆಸ್ಸಿನ ಎನ್ಎಸ್ಐಯ ಅಕ್ಷಯ ಲಾಕಡಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭಲ್ಲಿ ವಿಜಯಕುಮಾರ್ ಆಗ್ರಹಿಸಿದರು.