ಮಂಗಳೂರು, ಸೆ 27 (Daijiworld News/RD): ನಗರದ ಪಾಂಡೇಶ್ವರದ ಬಳಿ ಇರುವ ಮಾಲ್ನಲ್ಲಿ ನಡೆದ ಯುವಕನಿಗೆ ತಂಡವೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಾಪರಾಧಿ ಸೇರಿದಂತೆ ಒಟ್ಟು 7 ಮಂದಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. 6 ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಾಲಕನನ್ನು ಬಾಲಮಂಡಳಿಗೆ ಹಾಜರುಪಡಿಸಿದ್ದು, ರಿಮಾಂಡ್ ಹೋಂಗೆ ಕಳುಹಿಸಲಾಗಿದೆ. ಪ್ರಕರಣದಲ್ಲಿ ಬಂಧಿತರು ನಗರದ ಕಾಲೇಜೊಂದರ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಂತಿನಗರ ಕಾವೂರಿನ ಮೊಯಿಯುದ್ದೀನ್ ಸಫ್ವಾನ್ (19), ಮಂಜೇಶ್ವರ ನಿವಾಸಿ ಅಬ್ದುಲ್ ರಹಿಮ್ ಸಾದ್ (19), ತೌಡುಗೋಳಿ ನಿವಾಸಿ ಮೊಹಮ್ಮದ್ ಮರ್ಝಕ್ (19), ಬಸ್ತಿಪಡ್ಪು ನಿವಾಸಿ ಫರಾನ್ ಫಾರೂಕ್ (19), ಮಂಜೇಶ್ವರ ನಿವಾಸಿ ಸಾರಿಕ್ ಫರಾನ್ (19), ಪಾಂಡೇಶ್ವರ ನಿವಾಸಿ ಷಹಲ್ ಬಿಲ್ (19) ಹಾಗೂ ಅಪ್ರಾಪ್ತ ಬಾಲಕ ಬಂಧಿತ ಆರೋಪಿಗಳು.
ಇವರಲ್ಲಿ ಸಫ್ವಾನ್, ಸಾದ್ ಮತ್ತು ಬಾಲಕನನ್ನು ಬುಧವಾರ ಬಂಧಿಸಿದರೆ,ಉಳಿದವರನ್ನು ಗುರುವಾರ ಬಂಧಿಸಲಾಗಿತ್ತು.