ಕೋಲ್ಕತಾ ಜ 1: ತ್ರಿವಳಿ ತಲಾಖ್ ಪಿಡುಗಿನ ವಿರುದ್ದ ಮುಸ್ಲಿ ಸಮುದಾಯದ ಮಹಿಳೇಯರ ಪರ ದ್ವನಿ ಎತ್ತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಇಶ್ರತ್ ಜಹಾನ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.ಪಕ್ಷದ ಹೌರಾ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾದರು' ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಂತನ್ ಎಂದು ಬಸು ತಿಳಿಸಿದ್ದಾರೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ. ಜಹಾನ್ ಅವರನ್ನು ಸನ್ಮಾನಿಸಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ಇವಿಷ್ಟೇ ಅಲ್ಲದೆ ಪಿಡುಗಿನ ವಿರುದ್ದ ದಿಟ್ಟ ನಿಲುವು ತೋರಿದ ಜಹಾನ್ ಅವರನ್ನು ಅಭಿನಂದಿಸಲು ರಾಜ್ಯಮಟ್ಟದಲ್ಲಿ ಬೃಹತ್ ಸಮಾರಂಭ ಆಯೋಜಿಸುವುದಾಗಿ ಬಸು ತಿಳಿಸಿದ್ದಾರೆ.ಇವರಿಗೆ ಇವರ ಪತಿ 2014 ರಲ್ಲಿ ವಿದೇಶದಿಂದ ಪೋನ್ ಮೂಲಕ ತಲಾಖ್ ನೀಡಿದ್ದರು. ತಲಾಖ್ ಆಚರಣೆಯ ವಿರುದ್ದ ಸುಪ್ರಿಂ ಕೋರ್ಟ್ ನಲ್ಲಿ ಐವರು ಮಹಿಳೆಯರು ದೂರು ನೀಡಿದ್ದರು.