ಉಡುಪಿ, ಸೆ 24 (Daijiworld News/MSP): ದೇಶದಲ್ಲಿ ಒಟ್ಟು 58 ಫಿಶ್ಮಿಲ್ಗಳಿದ್ದು ಸುಮಾರು 22 ಫಿಶ್ ಮಿಲ್ಗಳು ಕರ್ನಾಕದಲ್ಲಿವೆ. ಒಟ್ಟು ಜಿಎಸ್ ಟಿ ತೆರಿಗೆ ಮತ್ತು ದಂಡ ಸೇರಿ ಒಟ್ಟು ಮೊತ್ತ ರೂ 600 ಕೋಟಿ ಆಗುತ್ತದೆ ಅದರಲ್ಲಿ ಕರ್ನಾಟಕದಿಂದ ರೂ 300 ಕೋಟಿ ರೂ ತೆರಿಗೆ ಹಣ ಬರಬೇಕು. ಇದನ್ನು ವಿರೋಧಿಸಿ ಫಿಶ್ಮಿಲ್ಗಳು ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಧರಣಿ ಮಾಡುತ್ತಿದ್ದು, ಇದೀಗ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಜಿಎಸ್ಟಿ ಕೌನ್ಸಿಲ್ನಲ್ಲಿ ಚರ್ಚಿಸಿ ಅದನ್ನು ಸಂಪೂರ್ಣವಗಿ ವಿನಾಯಿತಿ ಗೊಳಿಸಿದ್ದಾರೆ. ಅದಕ್ಕಾಗಿ ಶಾಸಕ ರಘುಪತಿ ಭಟ್ ವಿತ್ತ ಸಚಿವೆ, ಸಂಸದೆಯವರಿಗೆ ಕೃತಜ್ಞತೆ ಸಲ್ಲಿಸದರು.
ಅವರು ಇಂದು ಉಡುಪಿ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ‘ಈ ಬಗ್ಗೆ ಶೋಭಾ ಕರಂದ್ಲಜೆ ನೇತೃತ್ವದಲ್ಲಿ ನಾಲ್ಕು ರಾಜ್ಯಗಳಾದ ಕರ್ನಾಟಕ, ಗೋವಾ, ಗುಜರಾತ್ ಮತ್ತು ಮಹಾರಾಷ್ಟ್ರದ ನಾಯಕರ ನಿಯೋಗ ಹೋಗಿ ಬೇಟಿಯಾಗಿತ್ತು. ಹಿರಿಯ ಪೇಜಾವರ ಶ್ರೀಗಳು ಕೂಡ ಮೀನುಗಾರರ ಸಮಸ್ಯೆಯ ಬಗ್ಗೆ ವಿತ್ತ ಸಚಿವರ ಗಮನ ಸೆಳೆದಿದ್ದರು.
ಮೀನುಗಾರರಿಂದ 4 ರೂ ಕಡಿಮೆ ದರದಲ್ಲಿ ಮಿಲ್ ನಿಂದ ಜಿಎಸ್ಟಿ ಹೆಸರಲ್ಲಿ ಮೀನು ಖರೀದಿಸಲಾಗುತ್ತಿತ್ತು. ಇದೊಂದು ರೀತಿ ಮೀನುಗಾರರ ಭುಜದ ಮೇಲೆ ಗನ್ ಇಟ್ಟು ಸರಕಾರವನ್ನು ಹೆದರಿಸಿ ಹಣ ಲೂಟಿ ಮಾಡಿದ್ದಾರೆ ಎಂದು ಶಾಸಕ ರಘುಪತಿ ಭಟ್ ಆರೋಪ ಮಾಡಿದರು. ಈ ತೆರಿಗೆ ವಿನಾಯಿತಿಯಿಂದ ಫಿಶ್ಮಿಲ್ ಮಾಲಕರು ಬಹಳಷ್ಟು ಪ್ರಯೋಜನ ಪಡೆದುಕೊಂಡಿದ್ದಾರೆ. ಫಿಶಮಿಲ್ ಮಾಲಕರು ಮೀನುಗಾಋರಿಂದ ಖಡಿತ ಮಾಡಿದ ಹಣವನ್ನು ವಾಪಾಸು ಕೊಡಬೇಕು, ಎಂದು ಶಾಸಕ ಭಟ್ ಆಗ್ರಹಿಸಿದರು.
ಫಿಶಮಿಲ್ ಮಾಲಕರು ತೆರಿಗೆ ಕಟ್ಟದೆ ಇರುವಷ್ಟು ಅಸಾಮಾಥ್ರ್ಯರಲ್ಲ. ಇದರಿಂದ ಮಾಲಕರಿಗೆ ಸಾಕಷ್ಟು ಲಾಭವಾಗಿದ್ದು, ಬಡ ಮೀನುಗಾರರ ಹಿತದೃಷ್ಟಿಯನ್ನಿಟ್ಟುಕೊಂಡು ಈ ವಿನಾಯಿತಿಯನ್ನು ಮಾಡಲಾಗಿದೆ ಎಂದು ಉಡುಪಿಯ ಫಿಶಮಿಲ ಮಾಲಕರಿಗೆ ಟಾಂಗ್ ಕೊಟ್ಟರು.
ಸುವರ್ಣ ತ್ರಿಭುಜದ ಬಾಕಿ ವಿಮೆ ಮೊತ್ತ 28 ಲಕ್ಷದಷ್ಟಿದ್ದು ಸರಕಾರವೇ ಬರಿಸುವಂತೆ ಮನವಿ:
ಸುವರ್ಣ ತ್ರಿಭುಜ ಅವಘಡಕ್ಕೆ ಸಂಬಂದಿಸಿ ಭಟ್ ಮಾಧ್ಯಮ ಮಿತ್ತರರಿಗೆ ಉತ್ತರಿಸಿ, 'ಐಎನ್ ಎಸ್ ಕೊಚ್ಚಿ ತನಿಖೆಗೆ ಕೋರಿ ಹಾಗೂ ಗರಿಷ್ಠ ಮಟ್ಟದ ಪರಿಹಾರ ನೀಡಲು ರಾಜನಾಥ್ ಮತ್ತು ನಿರ್ಮಲಾ ಸೀತಾರಮನ್ ಅವರಿಗೆ ಈಗಾಗಲೆ ಮನವಿ ಮಾಡಲಾಗಿದೆ.
ಸುವರ್ಣ ತ್ರಿಭುಜದ ಬಾಕಿ ವಿಮೆ ಮೊತ್ತ 28 ಲಕ್ಷದಷ್ಟಿದ್ದು ಸರಕಾರಕ್ಕ ಬರಿಸಬೇಕಾಗಿದೆ. ಮಹಾಲಕ್ಷ್ಮಿ ಕೋಪರೇಟಿವ್ ಬ್ಯಾಂಕ್ನಲ್ಲಿ ಒಟ್ಟು 68 ಲಕ್ಷದಷ್ಟು ಸಾಲ ಇದೆ. ಇದು ಒಂದು ವಿರಳ ಮತ್ತು ಕಠಿಣ ಪ್ರಕರಣವಾದ್ದರಿಂದ ಸ್ವಲ್ಪ ಸಮಯ ಬೇಕಾಗಬಹುದು, ಭಟ್ ಅಭಿಪ್ರಾಯ ಪಟ್ಟರು.