ಮಂಗಳೂರು, ಸೆ.24(Daijiworld News/SS): ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಎಸ್.ಎಸ್.ಎಫ್ ಮೂಡಬಿದ್ರೆ ಡಿವಿಷನ್ ಹಾಗೂ ಎಸ್.ವೈ.ಎಸ್ ಕೈಕಂಬ ಸೆಂಟರ್ ವತಿಯಿಂದ ನೆರವು ನೀಡಲಾಗಿದೆ. ನೆರೆ ಪ್ರವಾಹದಿಂದ ಸಂಕಷ್ಟಕ್ಕೊಳಗಾದ ಸಂತ್ರಸ್ತರಿಗೆ ದಿನಪಯೋಗಿ ಪರಿಕರಗಳನ್ನು ವಿತರಿಸುವುದರ ಮೂಲಕ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ.
ಎಸ್.ಎಸ್.ಎಫ್ ಮೂಡಬಿದ್ರೆ ಡಿವಿಷನ್ ಹಾಗೂ ಎಸ್.ವೈ.ಎಸ್ ಕೈಕಂಬ ಸೆಂಟರ್ ವತಿಯಿಂದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತ ಮಕ್ಕಳಿಗೆ ಮಕ್ಕಳಿಗೆ ಸುಮಾರು ರೂ. 2,30,000 ಮೌಲ್ಯದ ಶಾಲಾ ನೋಟ್ ಪುಸ್ತಕ ಹಾಗೂ ರೂ. 2,00,000 ಮೌಲ್ಯದ ಶಾಲಾ ಬ್ಯಾಗ್ ವಿತರಿಸಲಾಗಿದೆ.
ಉತ್ತರ ಕರ್ನಾಟಕದ ಬಾಗಲಕೋಟೆಯ ಕಲಾಡಗಿ, ಮುಧೋಳ್ ಮತ್ತು ಬಾದಾಮಿಯ ನೆರೆ ಸಂತ್ರಸ್ತರಿಗೆ ರೂ. 5 ಲಕ್ಷ ಮೌಲ್ಯದ ಅಕ್ಕಿ, ಬಟ್ಟೆ ಬರೆಗಳು, ತಿಂಡಿ ತಿನಿಸುಗಳು, ಔಷಧಿಗಳು ಮತ್ತು ವಿವಿಧ ಅಗತ್ಯ ವಸ್ತುಗಳನ್ನು ನೀಡಲಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರದ ದಂಡಿನಪೇಟೆಯ ನೆರೆ ಸಂತ್ರಸ್ತರಿಗೆ ರೂ. 1 ಲಕ್ಷ ಮೌಲ್ಯದ ಅಕ್ಕಿ, ಬಟ್ಟೆ ಬರೆಗಳು, ಪುಸ್ತಕಗಳನ್ನು ವಿತರಿಸಲಾಗಿದೆ. ಬೆಳಗಾವಿ ಜಿಲ್ಲೆಯ ರಾಮ್ ದುರ್ಗ ತಾಲೂಕಿನ ಪಢಕೋತಿಗಲ್ಲಿ, ಕಿಲುಬನೂರ್, ನೇಕಾರ್ಪೇಟೆ ಹಾಗೂ ರೋಣ್ಕಲ್ ಕಪ್ಪ ಎಂಬ ಗ್ರಾಮದ ನೆರೆ ಸಂತ್ರಸ್ತರಿಗೆ ರೂ. 5 ಲಕ್ಷ ಮೌಲ್ಯದ ಅಕ್ಕಿ, ಬಟ್ಟೆ ಬರೆಗಳು ಮತ್ತು 1 ರಿಂದ 10 ನೇ ತರಗತಿಯ 1000 ಮಕ್ಕಳಿಗೆ ಶಾಲಾ ಕಿಟ್ ಹಂಚಿ ಮಾದರಿ ಕಾರ್ಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಎಸ್.ಎಫ್ ಮೂಡಬಿದ್ರೆ ಡಿವಿಶನ್ ಕೋಶಾಧಿಕಾರಿ ನಜೀಬ್ ಕೈಕಂಬ, ಡಿವಿಶನ್ ಅಧ್ಯಕ್ಷರಾದ ರಿಯಾಝ್ ಸಅದಿ ಗುರುಪುರ, ಡಿವಿಶನ್ ಕಾರ್ಯಕಾರಿ ಸದಸ್ಯರು ಹಾಗೂ ಎಸ್.ವೈ.ಎಸ್ ನಾಯಕರಾದ ಬಶೀರ್ ಎಡಪದವು, ರಝಾಕ್ ಹಾಜಿ ಗಂಜಿಮಠ, ಅಝೀಝ್ ಕೈಕಂಬ, ಶರೀಫಾಕ ಪ್ಲಾಸ್ಟಿಕ್ ಅಡ್ಡೂರು, ಝೈನುದ್ದೀನ್ ಅಡ್ಡೂರು, ಉಮರಬ್ಬ ಅಡ್ಡೂರು, ಜಲೀಲ್ ಅಡ್ಡೂರು, ಶಮೀರ್ ಉಳಾಯಿಬೆಟ್ಟು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.