ಮಂಗಳೂರು, ಡಿ 31 : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ನಗರದಲ್ಲಿ ೬೫೦ ಪೊಲೀಸ್ ಅಧಿಕಾರಿ, 120 ಗೃಹರಕ್ಷಕದಳ ದಳ ಸಿಬ್ಬಂದಿ ಗಳನ್ನು ಬಂದೋಬಸ್ತ್ ಗಾಗಿ ನೇಮಿಸಲಾಗಿದೆ. ಇನ್ನು 6 ಕೆ ಎಸ್ ಆರ್ ಪಿ ತುಕಡಿಗಳು ಮತ್ತು 15 ಸಿ ಎ ಆರ್ ತುಕಡಿ ಕೂಡಾ ನೇಮಿಸಲಾಗಿದೆ. ಇನ್ನು ಹೋಟೆಲ್, ರೆಸ್ಟೋರೆಂಟ್, ಸಭಾಂಗಣಗಳಲ್ಲಿ ಕಾರ್ಯಕ್ರಮ ನಡೆಸುವವರು ಅನುಮತಿ ಪಡೆದು ಮಧ್ಯರಾತ್ರಿ 12 ಗಂಟೆಯವರೆಗೆ ಮಾತ್ರ ಕಾರ್ಯಕ್ರಮ ನಡೆಸಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ. ಹೊಸವರ್ಷಾಚರಣೆ ಸಂದರ್ಭ ಕಾನೂನು ಕೈಗೆತ್ತಿಕೊಂಡು ಯಾರಾದರೂ ಸಾರ್ವಜನಿಕ ಶಾಂತಿ ಕದಡುವ ಪ್ರಯತ್ನ ಮಾಡಿದ್ರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.