ನವದೆಹಲಿ, ಡಿ 30: ತ್ರಿವಳಿ ತಲಾಖ್ ನಿಷೇಧ ಆಯಿತು.. ಇದೀಗ ತ್ರಿವಳಿ ತಲಾಖ್ ಗಿಂತಲೂ ಕೆಟ್ಟ ಪದ್ಧತಿಯಾದ ಬಹುಪತ್ನಿತ್ವಕ್ಕೆ ಮುಸ್ಲಿಂ ಪುರುಷರಿಗೆ ನಿಷೇಧ ಹೇರಬೇಕೆಂದು ಮಹಿಳೆಯರು ಒತ್ತಾಯಿಸುತ್ತಿದ್ದಾರೆ.
ಲೋಕಸಭೆಯಲ್ಲಿ ತ್ರಿವಳಿ ತಲಾಖ್ ನ್ನು ನಿಷೇಧಿಸುವ ಮಸೂದೆ ಅಂಗೀಕಾರಗೊಂಡ ನಂತರ ಅನೇಕ ಮುಸ್ಲಿಂ ಮಹಿಳೆಯರು ಇದೀಗ ತಮ್ಮ ಸಮುದಾಯದಲ್ಲಿ ಪುರುಷರು ಬಹುಪತ್ನಿತ್ವ ಹೊಂದುವ ಪದ್ಧತಿಯನ್ನು ಕೂಡ ನಿಷೇಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಲೋಕಸಭೆಯಲ್ಲಿ ವಿವಾಹಿತ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ 2017 ಮಸೂದೆ ಅಂಗೀಕಾರ ಬದಲಾವಣೆಗೆ ಹೊಸ ಆರಂಭವಾಗಿದ್ದು, ಗಂಡಂದಿರು ಪತ್ನಿಯರಿಂದ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡುವುದರಿಂದ ತಪ್ಪಿಸಿಕೊಳ್ಳಬಹುದು. ಈ ಹೊಸ ಕಾನೂನು ಜಾರಿಗೆ ಬಂದರೆ ಮಸ್ಲಿಂರಲ್ಲಿ ಗಂಡಂದಿರು ತಮ್ಮ ಪತ್ನಿಯರಿಗೆ ತಲಾಖ್ ಇ ಬಿದ್ಧತ್ ಹೇಳುವುದು ತಪ್ಪುತ್ತದೆ ಎಂದಿದ್ದಾರೆ.