ಸುರತ್ಕಲ್, ಸೆ 20 (Daijiworld News/RD): ಲೈಟ್ ಹೌಸ್ ಬಳಿ ಇರುವ ಗೆಸ್ಟ್ ಹೌಸ್ ಒಂದರ ಸಮೀಪ ಸಮುದ್ರ ಕಿನಾರೆಯ ಸಾರ್ವಜನಿಕ ರಸ್ತೆಯ ಬದಿ ತಮ್ಮ ಬಿಳಿ ಬಣ್ಣದ ಕಾರಿನಲ್ಲಿ ಎಮ್.ಡಿ.ಎಮ್ ಎಂಬ ನಿಷೇದಿತ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕೃಷ್ಣಾಪುರದ ಮಹಮ್ಮದ್ ಮುಜಾಮಿಲ್ (40), ಮೊಹಮ್ಮದ್ ಶರಿಫ್ ಸಿದ್ದಿಕ್ (40) ಎಂದು ಗುರುತಿಸಲಾಗಿದೆ.
ಸುರತ್ಕಲ್ ಲೈಟ್ ಹೌಸ್ ಬಳಿ ಇರುವ ಗೆಸ್ಟ್ ಹೌಸ್ ಒಂದರ ಸಮೀಪ ಸಮುದ್ರ ಕಿನಾರೆಯ ಸಾರ್ವಜನಿಕ ರಸ್ತೆಯ ಬದಿ ತಮ್ಮ ಬಿಳಿ ಬಣ್ಣದ ಕಾರಿನಲ್ಲಿ ಎಮ್.ಡಿ.ಎಮ್ ಎಂಬ ನಿಷೇದಿತ ಮಾದಕ ದ್ರವ್ಯವನ್ನು ಅಮಾಯಕ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿರುವುದಾಗಿ ಖಚಿತ ಮಾಹಿತಿ ಪಡೆದು, ಕಾರನ್ನು ಪರಿಶೀಲನೆ ನಡೆಸಿದ್ದು, ಕಾರಿನ ಒಳಗಡೆ ಇಬ್ಬರು ವ್ಯಕ್ತಿಗಳನ್ನು ತಪಾಸಣೆ ನಡೆಸಿದರು. ಈ ವೇಳೆ ಅವರ ಬಳಿಯಲ್ಲಿ ಮಾನವ ಜೀವಕ್ಕೆ ಅಪಾಯವನ್ನು ತಂದೊಡ್ಡುವಂತಹ ಎಮ್.ಡಿ.ಎಮ್. ಎಂಬ ನಿಷೇದಿತ ಮಾದಕ ದ್ರವ್ಯವನ್ನು ಇಟ್ಟುಕೊಂಡಿರುವುದು ಕಂಡುಬಂದಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರಲ್ಲಿದ್ದ ಬಿಳಿ ಬಣ್ಣದ ಕಾರು, 30.000 ರೂ ಮೌಲ್ಯದ ನಿಷೇದಿತ ಮಾದಕ ದ್ರವ್ಯ, ಮತ್ತು ನಾಲ್ಕು ಮೊಬೈಲ್ ಪೋನ್ ಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಸಿಪಿ ಶ್ರೀ ಶ್ರೀನಿವಾಸ ಗೌಡ.ಆರ್ (ಐಪಿಎಸ್) ರವರ ನೇತೃತ್ವದ ವಿಶೇಷ ಅಪರಾಧ ಪತ್ತೆ ದಳ ಮತ್ತು ಸುರತ್ಕಲ್ ಪೊಲೀಸರ ಜಂಟಿ ಕಾರ್ಯಚರಣೆ ನಡೆಸಿ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.