ಮಂಗಳೂರು, ಸೆ 19 (Daijiworld News/MSP): ಕರಾವಳಿ ಮೂಲದ ದುಬೈ ಉದ್ಯಮಿ ಬಿ.ಆರ್ ಶೆಟ್ಟಿ ಜಮ್ಮು ಕಾಶ್ಮೀರದಲ್ಲಿ ಬೃಹತ್ ಫಿಲ್ಮ್ ಸಿಟಿ ಆರಂಭಿಸಲು ಯೋಜನೆ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.
ಜಮ್ಮು-ಕಾಶ್ಮೀರದಲ್ಲಿ ಬೇರೆ ರಾಜ್ಯದವರು ಆಸ್ತಿ ಖರೀದಿಸಲು ಇದ್ದ ನಿಷೇಧ ತೆರವುಳಿಸಿರುವ ಹಿನ್ನೆಲೆಯಲ್ಲಿ ಈ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಅರಬ್ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ವೇಳೆ ಮಾತನಾಡಿರುವ ಬಿ.ಆರ್. ಶೆಟ್ಟಿ, ಜಮ್ಮು-ಕಾಶ್ಮೀರ ಅತ್ಯಂತ ರಮಣೀಯ ಸ್ಥಳವಾಗಿದ್ದು, ಅಲ್ಲಿ ಫಿಲ್ಮ್ ಸಿಟಿ ಆರಂಭಿಸಲು ಯೋಜನೆ ರೂಪಿಸಿದ್ದೇನೆ. ಹೀಗಾಗಿ ಜನರು ಅಲ್ಲಿಗೆ ಬಂದು ಚಿತ್ರಗಳನ್ನು ಚಿತ್ರೀಕರಿಸಬಹುದು.
ನನಗೆ ಈಗಾಗಲೇ ಜಮ್ಮು ಕಾಶ್ಮೀರ ಮತ್ತು ಲಡಾಕ್ ನಲ್ಲಿ ಸುಮಾರು 3 ಸಾವಿರ ಎಕರೆಯಷ್ಟು ಜಾಗ ನೀಡುವುದಾಗಿ ಆಫರ್ಗಳು ಬಂದಿವೆ ಎಂದು ಹೇಳಿದ್ದಾರೆ. ಆಗಸ್ಟ್ನಲ್ಲಿ ನರೇಂದ್ರ ಅವರು ಯುಎಇಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಮ್ಮು ಕಾಶ್ಮೀರದಲ್ಲಿ 7 ಸಾವಿರ ಕೋಟಿ ರೂ ಹೂಡಿಕೆ ಮಾಡುವುದಾಗಿ ಬಿ.ಆರ್. ಶೆಟ್ಟಿ ಪ್ರಕಟಿಸಿದ್ದರು.