ವಿಟ್ಲ, ಸೆ 19 (Daijiworld News/MSP): ಯಕ್ಷಗಾನದ ಮಹಾಬಲ'ರೆಂದೇ ಖ್ಯಾತರಾಗಿದ್ದ ಪ್ರೊ.ರಾಮ ಹೆಗಡೆ ಕೆರೆಮನೆ (67) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಬುಧವಾರ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಿದುಳಿನ ರಕ್ತಸ್ರಾವದಿಂದಾಗಿ ಮಣಿಪಾಲದಲ್ಲಿ ಚಿಕಿತ್ಸೆಗೆ ಸೇರಿದ್ದ ಅವರು ಕೋಮಾದಲ್ಲಿಯೇ ಇದ್ದರು.
ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿಸುಮಾರು 38 ವರ್ಷ ಗಣಿತ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ, ನಿವೃತ್ತರಾದ ಮೇಲೆ ಯಕ್ಷರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಿಂದುಸ್ತಾನಿ ಗಾಯಕ, ಗಂಗೂಬಾಯಿ ಹಾನಗಲ್ ಅವರ ಶಿಷ್ಯರಾಗಿದ್ದ ಇವರು ನಿವೃತ್ತರಾದ ಮೇಲೆ ಯಕ್ಷರಂಗದಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದರು
ಯಕ್ಷಗಾನದಲ್ಲಿರುವ ಅನೇಕ ಹಳೆಯ ರಾಗಗಳ ಕುರಿತು ಆಳವಾದ ಅಧ್ಯಯನ ಮಾಡಿ ದೀರ್ಘವಾದ ವೀಡಿಯೋ ಧ್ವನಿಸುರುಳಿ ರೆಕಾರ್ಡ್ ಮಾಡಿಸಲು ಸಿದ್ಧತೆ ಮಾಡಿಕೊಂಡಿದ್ದರು. ನೃತ್ಯಗಾರರೂ, ಹಾಡುಗಾರರೂ ಆಗಿದ್ದ ಅವರು ಮೃದಂಗ ವಾದನದಲ್ಲೂ ನಿಪುಣತೆ ಗಳಿಸಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ. ಅವರ ಅಂತ್ಯಕ್ರಿಯೆಯು ಬುಧವಾರ ಕೆರೆಮನೆಯಲ್ಲಿ ನೆರವೇರಿತು.