ಭಟ್ಕಳ, ಸೆ.18(Daijiworld News/SS): ಇಂಜಿನ್ ವೈಫಲ್ಯದಿಂದ ಮುಳುಗಡೆಯಾಗುತ್ತಿದ್ದ ಮೀನುಗಾರಿಕಾ ಬೋಟ್'ವೊಂದನ್ನು ಭಾರತೀಯ ಕರಾವಳಿ ಗಸ್ತು ಪಡೆ ರಕ್ಷಿಸಿದ ಘಟನೆ ಭಟ್ಕಳದ ಮಾವಿನಕುರ್ವೆ ಎಂಬಲ್ಲಿ ನಡೆದಿದೆ.
ಮೀನುಗಾರಿಕೆಗೆ ತೆರಳಿದ್ದ ಐ.ಎಫ್.ಬಿ ರೆಗ್ ಮೀನುಗಾರಿಕಾ ಬೋಟ್'ನಲ್ಲಿ ಇಂಜಿನ್ ವೈಫಲ್ಯ ಕಂಡು ಬಂದಿದೆ. ತಕ್ಷಣ ಇಂಜಿನ್ ವೈಫಲ್ಯದ ಕುರಿತು ಮೀನುಗಾರಿಕಾ ಇಲಾಖೆಗೆ ವರದಿಯನ್ನು ಮಾಡಿದೆ. ಮೀನುಗಾರಿಕಾ ಇಲಾಖೆಯು ಗಸ್ತು ಪಡೆಗಳಿಗೆ ಮಾಹಿತಿ ರವಾನಿಸಿದ್ದು, ತಕ್ಷಣ ಕರ್ನಾಟಕ ಗೋವಾ ಕರಾವಳಿಯಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಕೋಸ್ಟ್' ಗಾರ್ಡ್ ಹಡಗು ರಾಜ್ ದೂತ್ ಘಟನಾ ಸ್ಥಳಕ್ಕೆ ತೆರಳಿ ತಾಂತ್ರಿಕಾ ನೆರವು ನೀಡಿತು.
ಆದರೆ, ಬೋಟ್ ಇಂಜಿನ್ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಬಳಿಕ ಬೋಟ್'ನಲ್ಲಿದ್ದ ಎಲ್ಲಾ 23 ಮಂದಿಯನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಕರೆತರಲಾಗಿದೆ. ಸಮುದ್ರ ಮಧ್ಯೆ ನಿಂತ ಐಎಫ್'ಬಿ ಬೋಟ್'ನ್ನು ಭಟ್ಕಳ ಬಂದರಿಗೆ ಎಳೆದು ತರಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.