ಮಂಗಳೂರು, ಸೆ 17 (DaijiworldNews/SM): ದ.ಕ. ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಹಳೆಯಂಗಡಿ ಗ್ರಾಮಪಂಚಾಯತ್ ವಜಾಗೊಳಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ರಾಜಕೀಯ ದುರುದ್ದೇಶದಿಂದ ಸೇಡಿನ ಕಾರ್ಯ ಮಾಡಿದ್ದು ಅಧಿಕಾರ ದುರಪಯೋಗ ಪಡಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೈಗೊಂಡ ಕ್ರಮ ಸರಿಯಲ್ಲ. ಚುನಾಯಿತ ಪ್ರತಿನಿಧಿಗಳನ್ನು ಯಾವುದೇ ವಿಚಾರಣೆಗೊಳಪಡಿಸದೆ ಅವರಿಗೆ ಅವಕಾಶ ನೀಡದೆ ವಜಗೊಳಿಸಿರುವುದು ಮಾತ್ರವಲ್ಲದೆ ಗ್ರಾಮ ಸಭೆ, ಸಾಮಾನ್ಯ ಸಭೆ, ನಿಯಮಿತ ಕಾಲಕ್ಕೆ ಹಳೆಯಂಗಡಿಯಲ್ಲಿ ನಡೆದಿಲ್ಲ ಎಂದು ಆರೋಪಿಸಿ ಆಡಳಿತ ಮಂಡಳಿ ವಜಾ ಮಾಡಿರುವುದು ಖಂಡನಿಯವಾಗಿದೆ. ಜಿಲ್ಲಾ ಪಂಚಾಯತ್ ವಿಧಿ ನಿಯಮವನ್ನು ಪರಿಗಣಿಸದೆ ರಾಜಕೀಯ ದುರುದ್ದೇಶದ ಆದೇಶ ನೀಡಿರುದನ್ನು ಕಾಂಗ್ರೆಸ್ ಖಂಡಿಸುತ್ತೆ ಎಂದವರು ಹೇಳಿದರು.