ಸುಬ್ರಹ್ಮಣ್ಯ, ಸೆ 17 (Daijiworld News/RD): ಬೆಂಗಳೂರು ಮೂಲದ 12 ಮಂದಿ ಚಾರಣಿಗರ ತಂಡವೊಂದು ಕುಮಾರ ಪರ್ವತಕ್ಕೆ ಚಾರಣಕ್ಕೆ ತೆರಳಿದ್ದು, ಹಿಂದಿರುಗುವಾಗ, ತಂಡದಲ್ಲಿದ್ದ ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿ ಸಂತೋಷ್ ಭಾನುವಾರ ಗಿರಿಗದ್ದೆಯಲ್ಲಿ ನಾಪತ್ತೆಯಾಗಿದ್ದಾರೆ.
ಚಾರಣಿಗರ 12 ಮಂದಿ ತಂಡ ಶುಕ್ರವಾರ ಅಗಮಿಸಿ ಸುಬ್ರಹ್ಮಣ್ಯದ ದೇವರಗದ್ದೆ ಮಾರ್ಗವಾಗಿ ಕುಮಾರ ಪರ್ವತಕ್ಕೆ ಚಾರಣ ಬೆಳೆಸಿತ್ತು. ಗಿರಿಗದ್ದೆಯಲ್ಲಿ ತಂಗಿದ್ದ ತಂಡ ಭಾನುವಾರ ಶೇಷ ಪರ್ವತ ತನಕ ಚಾರಣಗೈದು ವಾಪಸ್ಸಾಗಿತ್ತು. ಸಂಜೆ 4.30 ರ ವೇಳೆಗೆ ಗಿರಿಗದ್ದೆ ಭಟ್ರ ಮನೆಯಲ್ಲಿ ಊಟ ಮಾಡಿ ತಂಡವು ವಾಪಸ್ಸು ಊರಿಗೆ ಹೊರಟಿದ್ದರು. ತಂಡದಲ್ಲಿದ್ದ 5 ಮಂದಿ ಮೊದಲಿಗೆ ಹೊರಟು ಬಂದಿದ್ದು ನಂತರ ಸಂತೋಷ್ ಒರ್ವನೆ ಬಂದಿದ್ದ ಅವರ ಹಿಂದಿಂದ 6 ಮಂದಿ ಬರುತಿದ್ದರು. ಈ ನಡುವೆ ಮದ್ಯದಲ್ಲಿದ್ದ ವ್ಯಕ್ತಿ ಕೇವಲ 10 ನಿಮಿಷ ಅಂತರದಲ್ಲಿ ಕಾಣೆಯಾಗಿದ್ದಾನೆ.
ಚಾರಣ ತಂಡದಲ್ಲಿದ್ದವರು ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಉದ್ಯೋಗಿಗಳು. ಘಟನೆ ನಡೆದ ಬಳಿಕ ರಾತ್ರಿಯೆ ವೈಲ್ಡ್ ಲೈಪ್ ಅಧಿಕಾರಿಗಳ ಮಾಹಿತಿ ನೀಡಿದ್ದು ಹುಡುಕಾಟ ನಡೆಸಲಾಗಿದೆ. ಆದರೆ ಆದರೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಬಗ್ಗೆ ತಂಡದ ಸದಸ್ಯ ದರ್ಶನ್ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.