ಮಂಗಳೂರು, ಡಿ 29: ಭಾರತ ನೌಕಾ ಪಡೆಯ ಮಾಜಿ ಅಧಿಕಾರಿ ಕುಲ್ಭೂಷಣ್ ಜಾಧವ್ ಅವರ ಕುಟುಂಬಕ್ಕೆ ಅವಮಾನ ಮಾಡಿದ ಪಾಕಿಸ್ತಾನದ ನಡೆಗೆ ಮಂಗಳೂರಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಹಿಳೆಯೊಬ್ಬಳ ಮಂಗಳ ಸೂತ್ರವನ್ನು ತೆಗೆಸಿ ಅವಮಾನ ಮಾಡಿರುವ ಪಾಕಿಸ್ತಾನದ ಕ್ರೂರ ನಡೆಯನ್ನು ಮಂಗಳೂರಿನ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ತೀವ್ರವಾಗಿ ಖಂಡಿಸಿದ್ದು, ಪಾಕಿಸ್ತಾನದ ಧ್ವಜ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಲಭೂಷಣ್ ಅವರನ್ನು ಭೇಟಿಯಾಗಲು ಹೊರಟ ಅವರ ಪತ್ನಿ ಚೇತನ್ ಕುಲ್ ಬಳಿ ಮಾಂಗಲ್ಯ ಸರ, ಬಳೆ ಕಳಚುವಂತೆ ಸೂಚಿಸಿದ್ದಲ್ಲದೆ, ಇಬ್ಬರನ್ನೂ ಜೈಲಿನ ಒಳ ಪ್ರವೇಶಿಸುವ ಮೊದಲು ಚಪ್ಪಲಿ ಕಳಚುವಂತೆ ಸೂಚಿಸಲಾಗಿತ್ತು. ಮತ್ತು ಅವರು ಅಲ್ಲಿಂದ ವಾಪಾಸ್ ಬರುವಾಗ ಅಧಿಕಾರಿಗಳು ಚಪ್ಪಲಿಗಳನ್ನು ವಾಪಾಸ್ ನೀಡಿರಲಿಲ್ಲ. ಪಾಕಿಸ್ತಾನದ ಈ ನೀತಿಯನ್ನು ಖಂಡಿಸಿ ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಧಿಕ್ಕಾರ ಕೂಗಿ ಪ್ರತಿಭಟಿಸಿದರು.