ಬೆಳ್ತಂಗಡಿ, ಡಿ 29: ರಾತ್ರಿ ವೇಳೆ ಕಾಡಿನಲ್ಲಿ ರಾಸಲೀಲೆ ನಡೆಸುತ್ತಿದ್ದ ಅನ್ಯಕೋಮಿನ ಜೋಡಿಗೆ ಸಂಘಟನೆಗಳ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟು ಬಳಿ ಈ ಘಟನೆ ನಡೆದಿದ್ದು, ಯುವಕನನ್ನು ಇರ್ಷಾದ್ ಎಂದು ಗುರುತಿಸಲಾಗಿದೆ. ಖಾಸಗಿ ಬಸ್ ಕಂಡಕ್ಟರ್ ಕೈಕಂಬ ನಿವಾಸಿ ಇರ್ಷಾದ್ ಬೆದ್ರಬೆಟ್ಟು ಸಮೀಪದ ಅರಣ್ಯದಲ್ಲಿ ಯುವತಿ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ. ಇದನ್ನು ನೋಡಿದ ಸ್ಥಳೀಯರು ಕೆಲ ಸಂಘಟನೆಗಳ ಕಾರ್ಯಕರ್ತರ ಜೊತೆ ಸೇರಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇರ್ಷಾದ್ ಗೆ ಮದುವೆಯಾಗಿ ಈಗಾಗಲೇ ಒಂದು ವರ್ಷದ ವರ್ಷದ ಮಗುವಿದೆ ಎಂದು ತಿಳಿದುಬಂದಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.