ಬಂಟ್ವಾಳ, ಸೆ 15(DaijiworldNews/SM): ಗ್ರಾಮೀಣ ಮಟ್ಟದ ಇತಿಹಾಸದಲ್ಲಿ ಯಶಸ್ವಿ 39ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಹಿದಾಯತುಲ್ ಇಸ್ಲಾಂ ವೆಲ್ಫೇರ್ ಎಜುಕೇಷನ್ ಕಮಿಟಿ, ಕಲಾಯಿ ಇದರ ಅಂಗವಾಗಿ, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ( ರಿ.) ಸಂಯುಕ್ತ ಆಶ್ರಯದಲ್ಲಿ ಎ ಜೆ ಆಸ್ಪತ್ರೆ ಮಂಗಳೂರು ಮತ್ತು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ನಾಟೆಕಲ್ ಮಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.
ಬೃಹತ್ ಶಿಬಿರದಲ್ಲಿ ಸಾರ್ವಜನಿಕರು ಹಲವಾರು ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು. ಮಾತ್ರವಲ್ಲ, ಹಲವರು ವೈದ್ಯಕೀಯ ಶಿಬಿರದ ಸದುಪಯೋಗವನ್ನು ಪಡೆದರು.
ಈ ವೇಳೆ ಕಲಾಯಿಯ ಅಂಬಿಕಾ ಸೇವಾ ಸಂಘದ ಅದ್ಯಕ್ಷ ಪುನೀತ್ ಹಾಗೂ ಕಾರ್ಯದರ್ಶಿ ಬಾಬು ರಕ್ತದಾನ ಮಾಡಿ ಸೌಹಾರ್ದತೆಗೆ ಸಾಕ್ಷಿಯಾದರು.