ಉಡುಪಿ, ಸೆ 14 (Daijiworld News/RD): ದಂಪತಿಗಳು ಉದ್ಯೋಗ ಕೊಡಿಸುವುದಾಗಿ ನಂಬಿಸಿ, 30 ಲಕ್ಷ ರೂಪಾಯಿ ವಂಚಿಸಿ ಮೋಸ ಮಾಡಿ ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ನಡೆದಿದೆ.
ಆರೋಪಿಗಳಾದ ಹಸೀನಾ ಪರ್ವಿನ್ ಹಾಗೂ ಆಕೆಯ ಗಂಡ ಆಸಿಫ್ ಇಸ್ಮಾಯಿಲ್ ಮೂಲತಃ ಬಜ್ಪೆಯ ನಿವಾಸಿಗಳು. ಇವರು ಜುಬೇದಾ ಗಂಡನಿಗೆ 30 ವರ್ಷ ವಿದೇಶದಲ್ಲಿ ಉದ್ಯೋಗ ಮಾಡಿದ ಸರ್ವಿಸ್ ಹಣವನ್ನೂ ನೀಡದೆ ವಂಚಿಸಿದ್ದಾರೆ. ಅಲ್ಲದೇ ಜುಬೇದಾ ಅವರ ತಂಗಿ ಜೀನತ್ ಮಗ ಅರ್ಫಾನ್ ಗೆ ವೀಸಾ ಮಾಡಿಸಿ ಕೊಡಿಸುವ ನೆಪದಲ್ಲಿ ಆರೋಪಿಗಳು 5 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಒಟ್ಟಾರೆ ಆರೋಪಿ ದಂಪತಿ 30 ಲಕ್ಷದ ತನಕ ವಂಚಿಸಿ, ಕೊಲೆ ಬೆದರಿಕೆ ಒಡ್ಡಿದ್ದು, ವಿದೇಶಕ್ಕೆ ಮತ್ತೆ ಪರಾರಿಯಾಗಿದ್ದಾರೆ. ಜುಬೇದಾ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಒಟ್ಟಾರೆ ಆರೋಪಿ ದಂಪತಿ 30 ಲಕ್ಷದ ತನಕ ವಂಚಿಸಿ, ಕೊಲೆ ಬೆದರಿಕೆ ಒಡ್ಡಿದ್ದು, ವಿದೇಶಕ್ಕೆ ಮತ್ತೆ ಪರಾರಿಯಾಗಿದ್ದಾರೆ. ಜುಬೇದಾ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.