ಬೆಂಗಳೂರು, ಡಿ 29: ಹೊಸ ವರ್ಷ ಆಚರಣೆಯ ಹಿನ್ನೆಲೆ ಮದ್ಯ ಸರಬರಾಜು ಮಾಡುವ ರೆಸ್ಟೋರೆಂಟ್ಗಳ ಅವಧಿಯನ್ನು ರಾತ್ರಿ 2 ಗಂಟೆವರೆಗೂ ವಿಸ್ತರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮದ್ಯ ಸರಬರಾಜು ಮಾಡುವ ರೆಸ್ಟೋರೆಂಟ್ಗಳಲ್ಲಿ ವಾರಾಂತ್ಯದಲ್ಲಿ ರಾತ್ರಿ 1 ಗಂಟೆವರೆಗೂ ಮದ್ಯ ಸರಬರಾಜು ಮಾಡುವ ಅವಕಾಶವಿತ್ತು. ಆದರೆ ಹೊಸ ವರ್ಷದಂದು ಒಂದು ಗಂಟೆ ಹೆಚ್ಚು ಅವಕಾಶ ನೀಡಲಾಗುತ್ತಿದ್ದು, ರೆಸ್ಟೋರೆಂಟ್ಗಳ ಅವಧಿಯನ್ನು ರಾತ್ರಿ 2 ಗಂಟೆವರೆಗೂ ವಿಸ್ತರಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಹೊಸ ವರ್ಷವನ್ನು ಸಂತಸದಿಂದ ಆಚರಿಸಿ. ಆದರೆ, ಮದ್ಯಪಾನ ಮಾಡಿ ಚಾಲನೆ ಮಾಡಬೇಡಿ. ಮತ್ತೊಂದೆಡೆ ಡಿ.30ರಿಂದಲೇ ನಗರದಾದ್ಯಂತ ಎಲ್ಲ ಕಡೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸಲಾಗುತ್ತದೆ. ಡಿ.31ರಂದು ರಾತ್ರಿ 9 ರಿಂದಲೇ ವಾಹನ ತಪಾಸಣೆ ತೀವ್ರಗೊಳಿಸಲಾಗುವುದು ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.