ಬೆಳ್ತಂಗಡಿ, ಸೆ 13 (DaijiworldNews/SM): ಧರ್ಮಸ್ಥಳ ಠಾಣಾ ವ್ಯಾಪ್ತಿಯ ತೋಟತ್ತಾಡಿ ಎಂಬಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ.
ಮೃತ ವ್ಯಕ್ತಿ ತೋಟತ್ತಾಡಿ ಗ್ರಾಮದ ತೋಪಿಲ ನಿವಾಸಿ ಜಿಜಿ ಯಾನೆ ಜೋಸೆಫ್ (53) ಎಂದು ಗುರುತಿಸಲಾಗಿದೆ. ಇವರು ತನ್ನ ಮನೆಯಲ್ಲಿಯೇ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಗೆ ದೂರು ನೀಡಲಾಗಿದ್ದು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಮೃತ ಯುವಕ ಜೀಪು ಚಾಲಕನಾಗಿ ಕೆಲಸ ಮಾಡುತ್ತಿದ್ದು ಈತನ ಆತ್ಮಹತ್ಯೆಗೆ ಕಾರಣದ ಬಗ್ಗೆ ಹಲವಾರು ಅನುಮಾನಗಳು ಸ್ಥಳೀಯವಾಗಿ ವ್ಯಕ್ತವಾಗುತ್ತಿದೆ. ಅಣಿಯೂರು ತೋಟ್ಟತ್ತಾಡಿ ಪ್ರದೇಶದಲ್ಲಿ ಬಡ್ಡಿ ಮಾಫಿಯಾ ದೊಡ್ಡಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ಯುವಕ ಅವರ ಕೈಯಿಂದ ಸಾಲಪಡೆದಿದ್ದ ಎಂದು ಹೇಳಲಾಗುತ್ತಿದೆ.
ಈಬಗ್ಗೆ ಗಲಾಟೆಯಾಗಿರುವುದಾಗಿಯೂ ಹೇಳಲಾಗುತ್ತಿದ್ದು, ಸಾಲದ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅನುಮಾನಿಸಲಾಗುತ್ತಿದೆ.
ಧರ್ಮಸ್ಥಳ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.