ಕಾಸರಗೋಡು, ಸೆ 13 (DaijiworldNews/SM): ವ್ಯಾಪಾರಿಯೋರ್ವರನ್ನು ಬೆದರಿಸಿ ೫೦ ಸಾವಿರ ರೂಪಾಯಿಯನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅಣಂಗೂರಿನ ಸಾಬಿತ್(32), ಕೊಲ್ಲಂಪಾಡಿಯ ಮುಹಮ್ಮದ್ ರಿಯಾಜ್(30), ಅಣಂಗೂರು ಟಿಪ್ಪುನಗರದ ಮುಹಮ್ಮದ್ ಅಶ್ರಫ್(24) ಮತ್ತು ಪುಳ್ಕೂರಿನ ಹಬೀಬ್(25) ಎಂದು ಗುರುತಿಸಲಾಗಿದೆ.
ನಗರದ ಹೊಸಬಸ್ಸು ನಿಲ್ದಾಣ ಪರಿಸರದ ವಸ್ತ್ರ ಮಳಿಗೆಯ ಮಾಲಕನಿಂದ ಆರೋಪಿಗಳು ಹಣ ದರೋಡೆ ನಡೆಸಿದ್ದರು. ಪ್ರಕರಣವೊಂದರಲ್ಲಿ ಸಿಲುಕಿಸುವುದಾಗಿ ಬೆದರಿಸಿದ ತಂಡವು ಎರಡು ಭಾರಿ ತಲಾ ೨೫ ಸಾವಿರ ರೂಪಾಯಿಯನ್ನು ಪಡೆದು ವಂಚಿಸಿದ್ದರು. ಈ ಬಗ್ಗೆ ನಗರ ಠಾಣಾ ಪೊಲೀಸರಿಗೆ ಲಭಿಸಿದ ದೂರಿನಂತೆ ಆರೋಪಿಗಳನ್ನು ಬಂಧಿಸಲಾಗಿದೆ.