ಉಡುಪಿ, ಸೆ 13 (Daijiworld News/MSP): ಸಂಬಂಧಿಯ ಮನೆಗೆ ಕನ್ನ ಹಾಕಿ 22 ಲಕ್ಷ ಎಗರಿಸಿದ ಘಟನೆ ಸೆ. 12 ರ ಗುರುವಾರ ಉಡುಪಿಯ ಒಳಕಾಡುವಿನ ಹರಿಶ್ಚಂದ್ರ ಮಾರ್ಗದಲ್ಲಿ ನಡೆದಿದೆ.
ಘಟನೆಯ ವಿವರ: ಮಾಣಿಕ್ಯ ಪಾಟೀಲ್ ಮನೆಯಲ್ಲಿ ಕಳ್ಳತನ ನಡೆದಿದ್ದು ಸೆ. 12 ರ ಗುರುವಾರ ಪತ್ನಿ ಸುನಂದ ಅವರು ಮಕ್ಕಳಿಗೆ ಮಕ್ಕಳಿಗೆ ಟಿಫಿನ್ ಕೊಡಲೆಂದು ಮಧ್ಯಾಹ 12:15ರ ಸುಮಾರಿಗೆ ಮನೆಗೆ ಬೀಗ ಹಾಕಿ ತೆರಳಿದ್ದರು. ಮನೆಗೆ 1 ಗಂಟೆ ಸುಮಾರಿಗೆ ವಾಪಾಸಾಗಿದ್ದು, ಈ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಮನೆ ಬಾಗಿಲು ಮುರಿದು ಪ್ರವೇಶಿದ್ದು ಅಡುಗೆ ಮನೆಯ ಪಾತ್ರೆ ಚೆಲ್ಲಾಪಿಲ್ಲಿಯಾಗಿತ್ತು. ಮಾತ್ರವಲ್ಲದೆ ಅಡುಗೆ ಮನೆಯ ಡಬ್ಬಗಳಲ್ಲಿದ್ದ 2೨ ಲಕ್ಷ ಹಣ ಮತ್ತು ಸುಮಾರು 30,000 ಮೌಲ್ಯದ ಅರ್ಧ ಕೆಜಿ ಬೆಳ್ಳಿಯು ಕಳವಾಗಿರುವುದು ಗಮನಕ್ಕೆ ಬಂದಿತ್ತು. ಮನೆಯವರ ಚಲನವಲವನಗಳ ಬಗ್ಗೆ ಚೆನ್ನಾಗಿಯೇ ಅರಿತಿದ್ದ ಸಂಬಂಧಿ ಸಾಂಗ್ಲಿಯ ಅತುಲ್ ಬಾಗ್ನೆ ಹಾಗೂ ಮತ್ತೊಬ್ಬನ ಸಹಾಯದೊಂದಿಗೆ ನಗ ನಗದು ದೋಚಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ.