ಮಂಗಳೂರು, ಸೆ 13 (Daijiworld News/MSP): ಮಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ, ಡಾ| ಹರ್ಷ ಅವರು ತಮ್ಮ ಮೊದಲನೇ ಪೊಲೀಸ್ ಸೇವಾ ಕವಾಯತನ್ನು ಮಂಗಳೂರಿನ ಪೊಲೀಸ್ ಮೈದಾನದಲ್ಲಿ ನಡೆಯಿತು. ಇಂದು ನಡೆಯಲಿರುವ ಪೊಲೀಸ್ ಸೇವಾ ಕವಾಯತಿನ ಬಗ್ಗೆ ನಗರ ಪೊಲೀಸ್ ಆಯುಕ್ತ ಡಾ| ಹರ್ಷ ತುಳುವಿನಲ್ಲಿ ಟ್ವೀಟ್ ಮಾಡಿ ಗಮನ ಸೆಳೆದಿದ್ದರು.
" ಕುಡ್ಲದ ಪೊಲೀಸ್ ಮೈದಾನಡ್ ಎಲ್ಲೆಕಾಂಡೆ 8-9ಗಂಟೆ ಮುಟ್ಟ ಪೊಲೀಸ್ ಸೇವಾ ಕವಾಯತು ನಡೆಯರುಂಡು. ಯಾನ್ ಅಧಿಕಾರಗ್ ಬತ್ತಿಬೊಕ್ಕ ಉಂದು ಎನ್ನ ಸುರತಾ ಕಾರ್ಯಕ್ರಮ. ಜಿಲ್ಲೆದ ಪೂರ ಪೊಲೀಸ್ ಅಧಿಕಾರಿ, ಸಿಬ್ಬಂದಿಲೆಡ ಪಾತೆರೆ ಬಾರಿ ಉಮೆದುಡುಲ್ಲೆ. ಅಂಚೆನೆ ಈ ಕಾರ್ಯಕ್ರಮ ಇಲಾಖೆದ ಫೇಸ್ಬುಕ್,ಟ್ವಿಟ್ಟರ್ಡ್ ಪ್ರಸಾರ ಅಪುನೆಟತ್ರ ಜನಕುಲು ಇಲ್ಲಡೆ ಕುಲೊಂದು ತುವೋಲಿ" ಎಂಬ ಕಮೀಷನರ್ ಟ್ವೀಟ್ ಗೆ ಕರಾವಳಿಯವರು ಫಿದಾ ಆಗಿದ್ರು.
ಸೇವಾ ಕವಾಯತಿನ ಬಳಿಕ ಬಳಿಕ ಮಾತನಾಡಿದ ಅವರು, ಪೊಲೀಸ್ ಕುಟುಂಬ ವಿಸ್ತರಣೆಯಾಗಿದೆ, ನಮ್ಮ ಮಂಗಳೂರು ಪೊಲೀಸ್ ಜನಸ್ನೇಹಿಯಾಗುವತ್ತ ಹೊರಹೊಮ್ಮಿದೆ. “ ಮೈ ಬೀಟ್ ಮೈ ಪ್ರೈಡ್” ವ್ಯವಸ್ಥೆಯಲ್ಲಿ 756 ವಾಟ್ಸಾಪ್ ಗುಂಪು ಒಂದು ತಿಂಗಳ ಅವಧಿಯೊಳಗೆ 30,000 ಜನ ನಮ್ಮ ಕೈಹಿಡಿದಿದ್ದಾರೆ. ಉಳ್ಳಾಲದಲ್ಲಿ ಪೊಲೀಸ್ ಕಣ್ಣಿಗೆ ಮಣ್ಣೆರಚಿ ೩೦ ವರ್ಷಗಳಿಂದ ತಲೆಮರೆಸಿ ಓಡಾಡಿಕೊಂಡಿದ್ದ ಆರೋಪಿಯೊಬ್ಬ " ಮೈ ಬೀಟ್ ಮೈ ಪ್ರೈಡ್ " ವ್ಯವಸ್ಥೆಯ ಬಳಿಕ ಪೊಲೀಸ್ ಬಲೆಗೆ ಬೀಳುವಂತಾಯಿತು. ಇಂತಹ ಅನೇಕ ಉದಾಹಣೆಗಳು ಇದೆ. ಜನಮುಖಿಯಾಗಿ ಕೆಲಸ ಮಾಡಲು ಮಂಗಳೂರು ಜನರು ತೋರುತ್ತಿರುವ ಪ್ರೀತಿಗೆ ಖುಣಿ ಎಂದರು. ಜನರ ಸುರಕ್ಷತೆ, ಸಿಬ್ಬಂದಿ ಯೋಗಕ್ಷೇಮ, ಅಪರಾಧಮುಕ್ತ, ಮಾದಕದ್ರವ್ಯಮುಕ್ತ ಮಂಗಳೂರು ನಮ್ಮ ಗುರಿ. ಇದನ್ನು ಈಡೇರಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು