ವಿಟ್ಲ ಡಿ 28: ಇಲ್ಲಿನ ಠಾಣಾ ವ್ಯಾಪ್ತಿಯ ವೀರಕಂಬ ಮಸೀದಿಗೆ ಕಿಡಿಗೇಡಿಗಳ ತಂಡವೊಂದು ಕಲ್ಲೆಸೆದು ಕಿಟಕಿ ಗಾಜುಗಳನ್ನು ಪುಡಿಗೈದ ಘಟನೆ ಡಿ.27ರ ತಡರಾತ್ರಿ ನಡೆದ ಬಗ್ಗೆ ವರದಿಯಾಗಿದೆ. ವೀರಕಂಬ ಬಳಿ ಇರುವ ಜಮಾಅತ್ ಮಸೀದಿಗೆ ತಡರಾತ್ರಿ ಕಲ್ಲೆಸೆಯಲಾಗಿದ್ದು, ಘಟನೆಯಿಂದಾಗಿ ಮಸೀದಿಯ ನಾಲ್ಕು ಕಿಟಕಿಯ ಗಾಜುಗಳಿಗೆ ಹಾನಿಯಾಗಿದೆ.
ಮುಂಜಾನೆ ವೇಳೆ ನಮಾಝ್ ಗಾಗಿ ಸ್ಥಳೀಯರು ಬಂದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಘಟನೆಯ ಕುರಿತು ವಿಟ್ಲ ಠಾಣಾ ಪೊಲೀಸರಿಗೆಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.