ಉಡುಪಿ, ಸೆ 13 (Daijiworld News/RD): ಇತ್ತೀಚೆಗೆ ನೂತನ ಮೋಟಾರು ಕಾಯ್ದೆಯಡಿಯಲ್ಲಿ ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿದ್ದು, ವಾಹನ ಸವಾರರಿಗೆ ಪೊಲೀಸರೇ ದೊಡ್ಡ ವೈರಿಗಳಾಗಿ ಕಾಣುತ್ತಿದ್ದಾರೆ. ಉಡುಪಿ ಪಿ. ಪಿ. ಸಿ ಕಾಲೇಜು ಬಳಿ ಕಾಲೇಜು ಬಿಡುವ ಹೊತ್ತಿನಲ್ಲಿ ಅಡ್ಡರಸ್ತೆಯಲ್ಲಿ ಜೀಪು ನಿಲ್ಲಿಸಿ ಮಫ್ತಿಯಲ್ಲಿರುವ ಪೋಲೀಸರು ಮೋಟಾರು ಕಾಯ್ದೆ ಉಲ್ಲಂಘಿಸಿದ ಸಾರ್ವಜನಿಕರಿಗೆ, ವಿಧ್ಯಾರ್ಥಿಗಳ ಬಳಿ ದಾಖಲೆ ಕೇಳಿದ ಸಂದರ್ಭದಲ್ಲಿ ಏಕಾಏಕಿ ಪೋಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ ವೀಡಿಯೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ಕೇಂದ್ರ ಸರಕಾರದ ಮೋಟಾರು ವಾಹನ ಕಾಯ್ದೆ ಕಡ್ಡಾಯ ವಾದ ನಂತರ ಸಂಚಾರಿ ಪೋಲಿಸರು ಇನ್ನಷ್ಟು ಚುರುಕುಗೊಂಡಿದ್ದು, ಕಾಲೇಜು ಮಕ್ಕಳಲ್ಲಿ ಕಾನೂನು ಬಾಹಿರ ಲೈಸೆನ್ಸ್, ಹೆಲ್ಮೆಟ್, ಇನ್ಸೂರೆನ್ಸ್ ಇಲ್ಲದ ವಾಹನಗಳಿಗೆ ದಂಡ ಹಾಕುತ್ತಿದ್ದಾರೆ. ಬೇರೆ ಕಾಲೇಜಿನ ಆಸುಪಾಸಿನಲ್ಲಿ ಸಂಚಾರಿ ಪಡೆ ನಿಯಮ ಪಾಲಿಸದ ವಿದ್ಯಾರ್ಥಿಗಳಿಗಾಗಿ ಬಲೆ ಬೀಸಿಕೊಂಡು ಕಾಯುತ್ತಿದ್ದಾರೆ.
ಒಂದು ಕಡೆ ಸಾರ್ವಜನಿಕರು ಒಳ್ಳೆಯ ಬೆಳೆವಣಿಗೆ ಎಂದರೆ ಇನ್ನೊಂದು ಕಡೆ ಅಷ್ಡೊಂದು ದೊಡ್ಡ ಮೊತ್ತದ ದಂಡ ಸರಿಯಲ್ಲ, ಎಂದು ಹೇಳುತ್ತಿದ್ದಾರೆ. ಪಿಪಿಸಿ ಕಾಲೆಜು ರಸ್ತೆ ಬಳಿ ನಡೆದ ಘಟನೆ ಗೆ ಸಂಚಾರಿ ಪೋಲೀಸ್ ಎಸ್ ಐ ದಾಯ್ಜಿವರ್ಲ್ಡ್ ಗೆ ಸ್ಪಷ್ಟನೆ ನೀಡುತ್ತಾ, ಸಾರ್ವಜನಿಕರು ಸಾಮಾನ್ಯವಾಗಿ ಪೋಲಿಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ದಾಖಲೆ ಇಲ್ಲ ಮನೆಗೆ ಹೋಗಿ ಎಂದು ಸಬೂಬು ಹೇಳುತ್ತಾರೆ. ಆಗ ನಾವು ಮುಲಾಜಿಲ್ಲದೆ ದಂಡ ತೆರಲು ನೋಟೀಸು ಕೊಡುತ್ತೇವೆ. ನಂತರ ಕೋರ್ಟ್ ನಲ್ಲಿ ದಂಡ ಕಟ್ಟಬೇಕು. ಒಮ್ಮೆಲೆ ಮಫ್ತಿಯಲ್ಲಿ ನಿಂತ ಸಂಚಾರಿ ಫೋಲಿಸರ ಮಧ್ಯೆ ಮಾತು ಬೆಳೆದು, ಮತ್ತೆ ಸುಮ್ನನಾಗಿದ್ದಾರೆ ಎಂದು ಅವರು ಹೇಳಿದರು.
ಕೇವಲ ಕಾಲೆಜು ಮಕ್ಕಳಿಗೆ ಮಾತ್ರವಲ್ಲ ಮೋಟಾರು ವಾಹನ ಇದ್ದವರು ಸರಿಯಾದ ದಾಖಲೆಯನ್ನು ಇಟ್ಟು ಕೊಂಡು ಹೋಗಲೇಬೇಕು. ಇಲ್ಲದಿದ್ದರೆ ಬಾರಿ ಮೊತ್ತದ ದಂಡ ತೆರಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.