ಉಡುಪಿ, ಸೆ 12 (DaijiworldNews/SM): ಇತ್ತೀಚಿಗೆ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ದುಬಾರಿ ದಂಡ ವಿಧಿಸಲಾಗುತ್ತಿದ್ದು, ಪೊಲೀಸರು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರಾವಳಿಯಲ್ಲೂ ಪೊಲೀಸರು ಅಲರ್ಟ್ ಆಗಿದ್ದಾರೆ.
ಉಡುಪಿ ಪಿ. ಪಿ. ಸಿ ಕಾಲೇಜು ಬಳಿ ಕಾಲೇಜು ಬಿಡುವ ಹೊತ್ತಿನಲ್ಲಿ ಅಡ್ಡ ರಸ್ತೆಯಲ್ಲಿ ಜೀಪು ನಿಲ್ಲಿಸಿ ಮಫ್ತಿಯಲ್ಲಿರುವ ಪೊಲೀಸರು ಮೋಟಾರು ಕಾಯ್ದೆ ಉಲ್ಲಂಘಿಸಿದ ಸಾರ್ವಜನಿಕರು, ವಿದ್ಯಾರ್ಥಿಗಳ ಬಳಿ ದಾಖಲೆ ಕೇಳಿದ ಸಂದರ್ಭದಲ್ಲಿ ಏಕಾಏಕಿ ಸಾರ್ವಜನಿಕರೊಬ್ಬರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದ್ದು, ಈ ವೀಡಿಯೋ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ಪಿಪಿಸಿ ಕಾಲೆಜು ರಸ್ತೆ ಬಳಿ ನಡೆದ ಘಟನೆಗೆ ಸಂಚಾರಿ ಪೋಲೀಸ್ ಎಸ್ ಐ ದಾಯ್ಜಿವರ್ಲ್ಡ್ ಗೆ ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕರು ಸಾಮಾನ್ಯವಾಗಿ ಪೋಲಿಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಆಗ ನಾವು ಮುಲಾಜಿಲ್ಲದೆ ದಂಡ ತೆರಲು ನೋಟೀಸು ಕೊಡುತ್ತೇವೆ. ನಂತರ ಕೋರ್ಟ್ ನಲ್ಲಿ ದಂಡ ಕಟ್ಟಬೇಕು. ಒಮ್ಮೆಲೆ ಮಫ್ತಿಯಲ್ಲಿ ನಿಂತ ಸಂಚಾರಿ ಪೊಲೀಸರ ಮಧ್ಯೆ ಮಾತು ಬೆಳೆದು, ಮತ್ತೆ ಸುಮ್ನನಾಗಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ಮೋಟಾರು ವಾಹನ ಕಾಯ್ದೆ ಕಡ್ಡಾಯವಾದ ನಂತರ ಸಂಚಾರಿ ಪೋಲಿಸರ ಬೀಟಿಂಗ್ ಇನ್ನಷ್ಟು ಚುರುಗೊಂಡಿದೆ. ಕಾಲೇಜು ಮಕ್ಕಳ ಕಾನೂನು ಬಾಹಿರ ಲೈಸೆನ್ಸ್, ಹೆಲ್ಮೆಟ್, ಇನ್ಸೂರೆನ್ಸ್ ಇಲ್ಲದ ವಾಹನಗಳಿಗೆ ದಂಡ ಹಾಕುತ್ತಿದ್ದಾರೆ. ಬೇರೆ ಕಾಲೇಜಿನ ಆಸುಪಾಸಿನಲ್ಲಿ ಸಂಚಾರಿ ಪೊಲೀಸರು ನಿಯಮ ಪಾಲಿಸದ ವಿದ್ಯಾರ್ಥಿಗಳಿಗಾಗಿ ಬಲೆ ಬೀಸಿಕೊಂಡು ಕಾಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ.