ಮಂಗಳೂರು, ಸೆ.12(Daijiworld News/SS): ಎಂತಹ ಕಠಿಣವಾದ ಕೆಲಸವೂ ಎಲ್ಲರ ಪ್ರಯತ್ನದಿಂದ ಸುಲಭ ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಯೂತ್ ರೆಡ್ ಕ್ರಾಸ್ (ಐ.ಆರ್.ಸಿ.ಯಸಸ್) ಅಧ್ಯಕ್ಷ ಪ್ರೋ. ಸಚೇತ್ ಸುವರ್ಣ ಹೇಳಿದರು.
ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು ವತಿಯಂದ ಆಯೋಜಿಸಲಾದ ರೆಡ್ ಕ್ರಾಸ್ ಘಟಕದ ಓರಿಯೆಂಟೇಶನ್ ಕಾಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಣ್ಣ ಸಣ್ಣ ಸಹಾಯದಿಂದಲೇ ಮಾನವೀಯತೆ ಜಾಗೃತಗೊಂಡು ಇತರರೂ ಸ್ಪಂದಿಸುವ ಸಂದರ್ಭ ಕೂಡಿ ಬರುತ್ತದೆ. ಸೇವೆಯಿಂದ ಸಿಗುವ ತೃಪ್ತಿಯೇ ಅತಿ ದೊಡ್ಡ ಬಹುಮಾನ ಎಂದು ಹೇಳಿದರು.
ಇದೇ ವೇಳೆ ಅವರು, ರೆಡ್ ಕ್ರಾಸ್ನ ಧ್ಯೇಯೋದ್ಧೇಶಗಳನ್ನು ಹಾಗೂ ತರ್ತು ಸಂದರ್ಭದಲ್ಲಿ ಯಾವ ರೀತಿ ಕಾರ್ಯಚರಣೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪನ್ಯಾಸಕಿ ಮಿನಾ ಎಸ್ ಕಜಂಪಾಡಿ ವಹಿಸಿದ್ದರು. ಈ ವೇಳೆ ಉಪನ್ಯಾಸಕರಾದ ಡಾ.ಶೋಭಾ, ಡಾ.ಗಣಪತಿ ಗೌಡ, ಗೀತಾ, ಡಾ.ರಾಜಲಕ್ಷ್ಮೀ, ಮತ್ತಿತ್ತರರು ಉಪಸ್ಥಿತರಿದ್ದರು. ಯೂತ್ ರೆಡ್ ಕ್ರಾಸ್ ಘಟಕದ ಉಪಾಧ್ಯಕ್ಷೆ ಡಾ.ನಾಗರತ್ನ ಸ್ವಾಗತಿಸಿದರು, ವಿದ್ಯಾರ್ಥಿನಿ ಶ್ರುತಿ.ಡಿ ನಿರೂಪಿಸಿದರು.