ಪುತ್ತೂರು, ಸೆ 12 (Daijiworld News/MSP): ಅರಿಯಡ್ಕ ಗ್ರಾಮದ ಬಳ್ಳಿಕಾನ ಎಂಬಲ್ಲಿ ಮನೆಯೊಂದರಲ್ಲಿ ವೈಶಾವಾಟಿಕೆ ಪ್ರಕರಣ ಪತ್ತೆ ಮಾಡಿರುವ ಸಂಪ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಅರಿಯಡ್ಕ ಗ್ರಾಮದ ಬಳ್ಳಿಕಾನ ಎಂಬಲ್ಲಿರುವ ನಾರಾಯಣ ನಾಯ್ಕ ಎಂಬವರಿಗೆ ಸೇರಿದ ಮನೆಯಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಕುರಿತು ಲಭಿಸಿದ ಖಚಿತ ಮಾಹಿತಿ ಆಧಾರದಲ್ಲಿ ಸಂಪ್ಯ ಠಾಣಾ ಪೊಲೀಸ ಸಕ್ತಿವೇಲು ನೇತೃತ್ವದ ಪೊಲೀಸರು ಬುಧವಾರ ದಾಳಿ ನಡೆಸಿ, ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದ ಸುಳ್ಯ ಸಂಪಾಜೆಯ ಅರೆಕಳ ರೋಡ್ ನಿವಾಸಿ ಮಂಗಳೂರಿನಲ್ಲಿ ಲಾರಿ ಚಾಲಕನಾಗಿರುವ ಚರಣ್ (25ವ), ಪುತ್ತೂರು ಕೆಮ್ಮಿಂಜೆ ಗ್ರಾಮದ ಮೊಟ್ಟೆತಡ್ಕ ಲಾರಿಯ ನಿರ್ವಾಹಕ ಅರುಣ್ ಕುಮಾರ್(38ವ) ಹಾಗೂ ವೇಶ್ಯಾವಾಟಿಕೆಗೆ ಮನೆಯಲ್ಲಿ ಅನುಮತಿ ನೀಡಿದ ಬಳ್ಳಿಕಾನ ನಿವಾಸಿ ನಾರಾಯಣ ನಾಯ್ಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಮಹಿಳೆಯನ್ನು ರಕ್ಷಿಸಲಾಗಿದೆ. ತಾನು ಹೋಮ್ ಪ್ರೋಡಕ್ಟ್ ಸಾಮಾಗ್ರಿಗಳ ಲೈನ್ ಸೇಲ್ ಮಾಡುತ್ತಿದ್ದು ತನ್ನನ್ನು ಚರಣ್ ಮತ್ತು ಅರುಣ್ ಕುಮಾರ್ ಪುಸಲಾಯಿಸಿ ಕರೆದಿರುವುದಾಗಿ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ಮತ್ತು ನೊಂದ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ನೊಂದ ಮಹಿಳೆಗೆ ಮಂಗಳೂರು ಪ್ರಜ್ಞಾ ಮಹಿಳಾ ಘಟಕಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.