ಮಂಗಳೂರು ಡಿ 28 : ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಬಿಡುಗಡೆಯಾಗಿದ್ದ ಗೋರಿಗುಡ್ಡೆಯ ರೌಡಿ ಶೀಟರ್ ಮೆರ್ಲಿಕ್ ಅಂತೋನಿ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ನಗರ ದಕ್ಷಿಣ ವಿಭಾಗದ ಪೊಲೀಸರು ಡಿ 27 ರ ಗುರುವಾರ ಬಂಧಿಸಿದ್ದಾರೆ. ಬಂಧಿತರನ್ನು ಗೋರಿಗುಡ್ಡೆಯ ನಿಶಾಕ್ ಪೂಜಾರಿ ( 28) , ಗೋರಿಗುಡ್ಡೆಯ ವಿನೇಶ್ ಕುಮಾರ್ ( 30) , ಮುಳಿಹಿತ್ಲುವಿನ ಸಚಿನ್ ಶೆಟ್ಟಿ (22), ಜಪ್ಪಿನ ಮೊಗರು ವಿನ ಗಣೇಶ್ ಕುಲಾಲ್ (34) , ನೆಕ್ಕರೆ ಮಾರ್ ನ ಪ್ರವೀಣ್ ಪೂಜಾರಿ( 42) , ಜೆಪ್ಪು ಕುಡ್ಪಾಡಿಯ ಸಂದೀಪ್ ಶೆಟ್ಟಿ (33) ಎಂದು ಗುರುತಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ 5 ಮಾರಕಾಸ್ತ್ರಗಳು, ಎರಡು ಮೋಟರ್ ಸೈಕಲ್ ಹಾಗೂ ಮೊಬೈಲ್ ಗಳನ್ನು ವಶಪಡಿಸಿಲಾಗಿದೆ.
ಘಟನೆಯ ವಿವರ : ಡಿ 25 ರ ಭಾನುವಾರ ತಡರಾತ್ರಿ ಐದು ಮಂದಿಯ ತಂಡವೊಂದು ಮೆರ್ಲಿಕ್ ಡಿಸೋಜ ಮನೆಗೆ ನುಗ್ಗಿ ಆತನ ಅಜ್ಜಿ ಎದುರೇ ತಲವಾರಿನಿಂದ ಹಲ್ಲೆ ನಡೆಸಿದ್ರು. ಗಂಭೀರ ಗಾಯಗೊಂಡು ಆತ ಮೃತನಾಗಿದ್ದ
ಆರೋಪಿ ನಿಶಾಕ್ ಪೂಜಾರಿ ಹಾಗೂ ಮೆಲ್ರಿಕ್ ಅಂತೋನಿ ಪೂರ್ವ ದ್ವೇಷವಿದ್ದು, ಇದಲ್ಲದೆ ಮಾರ್ನಮಿ ಕಟ್ಟೆ ಸಂದೀಪ್ ಶೆಟ್ಟಿಯನ್ನು ಮೆರ್ಲಿಕ್ 2016 ರ ಮೇ ಯಲ್ಲಿ ಮಾರಾಕಾಸ್ತ್ರಗಳಿಂದ ಕೊಲೆ ನಡೆಸಲು ಯತ್ನಿಸಿದ್ದರು. ಇದಕ್ಕೆ ಪ್ರತಿಕಾರವಾಗಿ ಸಂದೀಪ್ ಶೆಟ್ಟಿ ಪ್ರೇರಣೆಯಂತೆ ಉಳಿದ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ..
ಆರೋಪಿಗಳ ಪೈಕಿ ಪ್ರವೀಣ್ ಎಂಬಾತ ಮೇಲೆ ಈ ಹಿಂದೆ ಹಲವು ಕೊಲೆ ಪ್ರಕರಣ ಹಾಗೂ ಕೊಲೆಯತ್ನ ಪ್ರಕರಣ ಮತ್ತು ಸಂದೀಪ್ ಶೆಟ್ಟಿಯ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದೆ , ಇನ್ನು ಆರೋಪಿ ಸಚಿನ್ ಹೊಟೇಲ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿಯಾಗಿದ್ದಾನೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಟಿ ಆರ್ ಸುರೇಶ್ ರವರ ನಿರ್ದೇಶನ ದಂತೆ , ಶ್ರೀ ಹನುಮಂತರಾಯ ಡಿ.ಸಿ.ಪಿ. ಮತ್ತು ಉಮಾ ಪ್ರಶಾಂತ್ ಡಿಸಿಪಿ (ಅಪರಾದ ಮತ್ತು ಸಂಚಾರ ವಿಭಾಗ ) ರವರ ಮಾರ್ಗದರ್ಶನದಲ್ಲಿ ಮಂಗಳೂರು ರೌಡಿ ನಿಗ್ರಹ ದಳದ ಎ ಸಿ ಪಿ ರಾಮರಾವ್ ರವರು ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ವಿಭಾಗದ ಠಾಣಾ ನಿರೀಕ್ಷಕರಾದ ಬೆಳ್ಳಿಯಪ್ಪ ಹಾಗೂ ಠಾಣಾ ಪಿಎಸ್ಐ ರಾಜೇಂದ್ರ ಬಿ ಮಂಗಳಾ ಹಾಗೂ ಸಿಬ್ಬಂದಿಗಳು ಸಹಕರಿಸಿದ್ದಾರೆ.