ಮಂಗಳೂರು, ಸೆ 11 (DaijiworldNews/SM): ಕಾರ್ಕಳದ ನಿಟ್ಟೆ ಡಾ ಎನ್ಎಸ್ಎಎಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆಪ್ಟೆಂಬರ್ ೯ರಂದು ಜರುಗಿದ ಪದವಿ-ಪೂರ್ವ ಕಾಲೇಜುಗಳ ಅಂತರ್ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಎನ್-ಇಗ್ಮಾ -2ಕೆ19’ರಲ್ಲಿ ಪಾಲ್ಗೊಂಡ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಅತ್ಯಪೂರ್ವ ಗೆಲುವು ದಾಖಲಿಸುವ ಮೂಲಕ ‘ಸಮಗ್ರ ಚಾಂಪಿಯನ್ಶಿಪ್ ಟ್ರೋಫಿ’ ತನ್ನದಾಗಿಸಿ ಕಾಲೇಜಿಗೆ ಹೆಗ್ಗಳಿಕೆ ತಂದಿದೆ.
ಟ್ರೆಶರ್ ಹಂಟ್ ಸ್ಪರ್ಧೆಯಲ್ಲಿ ಶ್ರೀಯಾ ರಾಮಚಂದ್ರನ್ ಮತ್ತು ಫಾತಿಮಾ ಅಮ್ರ ಪ್ರಥಮ ಸ್ಥಾನ ಪಡೆದರೆ, ಬೆಸ್ಟ್ ಮ್ಯಾನೇಜರ್ ಪ್ರಶಸ್ತಿಯನ್ನು ಶಮಾ ಆಸೀಯಾ ಅಬ್ಬಾಸ್ ಪಡೆದರು. ಸಾಮೂಹಿಕ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕಾಲೇಜಿನ ನೃತ್ಯಪಟುಗಳಾದ ಪ್ರಕೃತಿ ರಾವ್, ಶ್ರಾವ್ಯ ಸಿ ಸಾಲ್ಯಾನ್, ತ್ರಿಶಾ ಡಿ ಶೆಟ್ಟಿ, ವೈಷ್ಣವಿ ಪಿ ಜೋಗಿ, ಸೃಷ್ಟಿ ಶಿವಾನಂದ್, ನೇಹಾ ಎಸ್ ರಾವ್, ನಿವೇದಿತಾ ಪಡೆದುಕೊಂಡರು.
ಕಾಲೇಜಿಗೆ ಸಮಗ್ರ ಪ್ರಶಸ್ತಿ ತಂದು ಕೊಟ್ಟಿರುವ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲೆ ಹಾಗೂ ಆಡಳಿತ ಮಂಡಳಿ ಅಭಿನಂದಿಸಿದೆ.